ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ದಾಂಪತ್ಯ ಜೀನಕ್ಕಕೆ ಕಾಲಿಡಲು ಸಜ್ಜಾಗಿದ್ದಾರೆ ಸಂಸದ ತೇಜಸ್ವಿ ಸೂರ್ಯ. ಇನ್ನೂ ತೇಜಸ್ವಿ ಸೂರ್ಯ ಅವರ ಮದುವೆ ಮಾರ್ಚ್ 4 ರಂದು ನಿಶ್ಚಯವಾಗಿದೆ. ಇದೀಗ ಮೊದಲ ಬಾರಿಗೆ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಭಾವಿಪತ್ನಿ ಸಿವಶ್ರೀ ಸ್ಕಂದ ಪ್ರಸಾದ್ ಜೊತೆ ಕಾಣಿಸಿಕೊಂಡಿದ್ದಾರೆ.
ಹೌದು ಬೆಂಗಳೂರಿನ ಹೊರ ಹೊಲಯದಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಸಿವಶ್ರೀ ಸ್ಕಂದ ಪ್ರಸಾದ್ ಹಾಗೂ ಸಂಸದ ತೇಜಸ್ವಿ ಸೂರ್ಯ ಆಶೀರ್ವಾದ ಪಡೆದುಕೊಂಡಿದ್ದಾರೆ.
Chanakya Niti: ವಿವಾಹಿತ ಪುರುಷರು ಬೇರೆ ಮಹಿಳೆಯಗೆ ಆಕರ್ಷಿತರಾಗೋದ್ಯಾಕೆ..? ಚಾಣಕ್ಯ ನೀಡಿದ 5 ಕಾರಣಗಳು ಇಲ್ಲಿದೆ
ಇನ್ನೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮುದುವೆಯಾಗುತ್ತಿರೋ ಹುಡುಗಿ ಹೆಸರು ಸಿವಶ್ರೀ ಸ್ಕಂದ ಪ್ರಸಾದ್. ಬಿ.ಟೆಕ್ ಪದವೀಧರೆಯಾಗಿರುವ ಸಿವಶ್ರೀ ಸ್ಕಂದ ಪ್ರಸಾದ್ ತಮಿಳುನಾಡು ಮೂಲದವರು. ಸಿವಶ್ರೀ ಸ್ಕಂದ ಪ್ರಸಾದ್ ಅವರಿಗೆ ಸಂಗೀತ ಅಲ್ಲದೇ ಭರತನಾಟ್ಯದಲ್ಲೂ ಆಸಕ್ತಿ ಇದೆ. ಸಿವಶ್ರೀ ಮೂರನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದರು.
ಗಾಯಕಿಯ ತಂದೆ ಜೆ. ಸ್ಕಂದ ಪ್ರಸಾದ್ ಮೃದಂಗ ವಿಧ್ವಾಂಸರಾಗಿದ್ದಾರೆ. ಅವರ ಅಜ್ಜ ಕೂಡ ಸಂಗೀತಗಾರರಾಗಿದ್ದಾರೆ. ಎ.ಎಸ್. ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಿಂದ ಭರತನಾಟ್ಯ ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ. ಇದಷ್ಟೇ ಅಲ್ಲದೆ ಸಿವಶ್ರೀ ಸ್ಕಂದ ಪ್ರಸಾದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಈಗ ಇದೇ ಸಿವಶ್ರೀ ಸ್ಕಂದ ಪ್ರಸಾದ್ ಅವರನ್ನು ತೇಜಸ್ವಿ ಸೂರ್ಯ ಮದುವೆಯಾಗುತ್ತಿದ್ದಾರೆ.