ಫೆಬ್ರವರಿ 14ರಂದು ಪ್ರತಿಯೊಬ್ಬ ಪ್ರೇಮಿಗು ವಿಶೇಷ ದಿನ. ಈ ದಿನವನ್ನು ಪ್ರೇಮಿಗಳು ಸಖತ್ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡುತ್ತಾರೆ.
ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಪ್ರೇಮಿಗಳ ದಿನವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ನಟಿ ರಾಧಿಕಾ ಪಂಡಿತ್ ಪತಿ ಯಶ್ ಹಾಗೂ ಮಕ್ಕಳ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದಾರೆ.
ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಪತಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ರಾಧಿಕಾ ಪಂಡಿತ್ ತಿಳಿಸಿದ್ದಾರೆ. ಬ್ಲ್ಯಾಕ್ ಔಟ್ಫಿಟ್ ಧರಿಸಿ ಪತಿಯೊಂದಿಗೆ ನಿಂತಿರುವ ಒಂದು ಕಪಲ್ ಫೋಟೋವನ್ನು ರಾಧಿಕಾ ಶೇರ್ ಮಾಡಿದ್ದಾರೆ.
ನನ್ನ ವ್ಯಾಲೆಂಟೈನ್ಸ್ ಜೊತೆ ವ್ಯಾಲೆಂಟೈನ್ಸ್ ಡೇ ಲಂಚ್ ಎಂದು ರಾಧಿಕಾ ಪಂಡಿತ್ ಅವರು ಮಗಳು, ಮಗ ಹಾಗೂ ಪತಿಯೊಂದಿಗಿರುವ ಫೋಟೋವನ್ನು ಕೂಡಾ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ರಾಧಿಕಾ ಶೇರ್ ಮಾಡಿರುವ ಫೋಟೋದಲ್ಲಿ ಯಶ್ ಹಾಗೂ ರಾಧಿಕಾ ಗಾಗಲ್ಸ್ ಧರಿಸಿದ್ದರೆ ಮಕ್ಕಳಿಬ್ಬರು ಮುದ್ದಾಗಿ ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ರಾಧಿಕಾ ಹಂಚಿಕೊಂಡಿರುವ ಫೋಟೋದಲ್ಲಿ ಅವರಿದ್ದಂತಹ ಸ್ಥಳದಲ್ಲಿ ರೆಡ್ ಹಾರ್ಟ್ ಬಲೂನ್ಗಳಿಂದ ಸಿಂಪಲ್ ಆಗಿ ಡಿಸೈನ್ ಮಾಡಲಾಗಿತ್ತು.