ನಟಿ ಕಾವ್ಯಾ ಗೌಡ (Kavya Gowda) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಯ 2ನೇ ವರ್ಷದ ಆ್ಯನಿವರ್ಸರಿಯಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನ (Pregnancy) ನಟಿ ತಿಳಿಸಿದ್ದಾರೆ. ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡು ಅಭಿಮಾನಿಗಳಿಗೆ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ತಿಳಿಸಿದ್ದಾರೆ
ಈ ಖುಷಿ ಸುದ್ದಿಯನ್ನು ಗೌಪ್ಯವಾಗಿಡಲು ಸಾಕಷ್ಟು ಸಮಯದಿಂದ ಪ್ರಯತ್ನಿಸಿದ್ದೇವೆ. ಕೊನೆಗೂ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಹೇಳೋದಕ್ಕೆ ಖುಷಿಯಿದೆ. 2024ರಲ್ಲಿ ಮಗುವಿನ ಆಗಮನ ಆಗಲಿದೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 2, 2021ರಂದು ಉದ್ಯಮಿ ಸೋಮಶೇಖರ್ ಜೊತೆ ಕಾವ್ಯಾ ಗೌಡ ಮದುವೆಯಾದರು. ಬೆಂಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಅದ್ದೂರಿಯಾಗಿ ಹಸೆಮಣೆ (Wedding) ಏರಿದ್ದರು. ಕುಟುಂಬದವರು ಸಮ್ಮತಿಸಿದ ಮದುವೆಗೆ ನಟಿ ಗ್ರೀನ್ ಸಿಗ್ನಲ್ ನೀಡಿದ್ದರು