ರಾಮನಗರ : ರಾಜ್ಯದಲ್ಲಿ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ.. ಅತ್ತ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಭರ್ಜರಿ ಪ್ರಚಾರ ನಡೆಸಿದ್ದು, ಇತ್ತ ಕಾಂಗ್ರೆಸ್ ಕೂಡ ಸಿಪಿ ಯೋಗೇಶ್ವರ್ ಗೆಲುವಿಗೆ ಟೊಂಕ ಕಟ್ಟಿ ನಿಂತಿದೆ. ಈ ಮಧ್ಯೆಯೇ ಚನ್ನಪಟ್ಟಣ ರಣಕಣದಲ್ಲಿ ಜನಾಂಗೀಯ ನಿಂದನೆ ಸಹ ನಡೆದಿದೆ. ಹೌದು, ಪ್ರಚಾರ ಕಣದಲ್ಲಿ ಸಿ.ಪಿ.ಯೋಗೇಶ್ವರ್ ಪರ ಮತಯಾಚನೆ ವೇಳೆ ಸಚಿವ ಜಮೀರ್ ಅಹ್ಮದ್ ನಾಲಿಗೆ ಹರಿಬಿಟ್ಟಿದ್ದಾರೆ.
Renukaswamy case: ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ʼಗೆ ಸರ್ಜರಿ ಫಿಕ್ಸ್!
ಚನ್ನಪಟ್ಟಣದಲ್ಲಿ ನಿನ್ನೆ ರಾತ್ರಿ ಪ್ರಚಾರದ ವೇಳೆ ಜಮೀರ್ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಿಸುವ ಭರದಲ್ಲಿ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. ಪ್ರಚಾರ ಸಭೆಯಲ್ಲಿ ಯೋಗೇಶ್ವರ್ ಹೊಗಳಿ, ಕರಿಯ ಕುಮಾರಸ್ವಾಮಿ ಎಂದು ವರ್ಣದ ಮೇಲೆ ಟಿಪ್ಪಣಿ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಯೋಗೇಶ್ವರ್ ನಮ್ಮ ಪಾರ್ಟಿಯಿಂದ ರಾಜಕೀಯ ಪ್ರಾರಂಭ ಮಾಡಿದ್ರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿ ಹೋದ್ರು, ಜೆಡಿಎಸ್ʼಗೆ ಹೋಗಬೇಕು ಅಂತಿದ್ರು. ಆದರೆ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ʼಗೆ ಹೋಗಿಲ್ಲ. ಹಿಂದೆ ಹಿಜಾಬ್ ಬೇಡೆ ಪಜಾಬ್ ಬೇಡ ಅಂದಿದ್ದೀಯಾ. ಈಗ ನಿನಗೆ ಮುಸಲ್ಮಾನರ ವೋಟ್ ಬೇಕಾ..?, ಏಯ್ ಕುಮಾರಸ್ವಾಮಿ, ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆದರೆ ಚುನಾವಣಾ ಕಣದಲ್ಲಿ ಹೆಚ್ ಡಿಕೆ ಟೀಕಿಸುವ ಭರದಲ್ಲಿ ಜನಾಂಗೀಯ ನಿಂದನೆ ಮಾಡಿದ್ದು ಎಷ್ಟು ಸರಿ ಎಂಬುದು ಹಲವರ ಪ್ರಶ್ನೆ.