ಹಾವೇರಿ: ಪದೇ ಪದೇ ನನ್ನನ್ನು ಚುಚ್ಚಿ ಚುಚ್ಚಿ ಕೊಲ್ತಿದ್ದಾರೆ ಎಂದು ಆರ್ ಶಂಕರ್ ಕಣ್ಣೀರು ಹಾಕಿದ ಘಟನೆ ರಾಣೇ ಬೆನ್ನೂರಿನ ಬೆಂಬಲಿಗರ ಸಭೆಯಲ್ಲಿ ನಡೆದಿದೆ. ನನ್ನನ್ನ ಗುಲಾಮನಾಗಿ ಕಂಡವರು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಎಂದು ಮಾಜಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ವಿರುದ್ದ ಶಂಕರ್ ವಾಗ್ದಾಳಿ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ದ ರಾಜಕೀಯ ಷಡ್ಯಂತ್ರ ಮಾಡಿದ್ರು. ಕ್ಷೇತ್ರದ ಜನರು ನನಗೆ ಮರುಜನ್ಮ ಕೊಡಬೇಕು,
ಮುಂದೆ ನಾನು ಶಾಸಕನಾಗ್ತಿನೋ, ಹಾಗೆ ಇರುತ್ತೇನೊ ಅದು ನನ್ನ ಹಣೆ ಬರಹ, ಈಶ್ವರಪ್ಪ ನ ಮಗನಿಗೆ ಟಿಕೆಟ್ ಕೊಡಬಹುದಾಗಿತ್ತಲ್ಲ ಆದ್ರೆ ಕೊಡಲಿಲ್ಲ, ನಮಗೆ ಕಣ್ಣಲ್ಲಿ ಕಣ್ಣೀರು ಬರುತ್ತಿದೆ, ಬೊಮ್ಮಾಯಿದು ಮೊಸಳೆ ಕಣ್ಣೀರು ಎಂದು ಕಿಡಿಕಾರಿದರು. ನಿಮ್ಮ ಸೇವೆ ಮಾಡಲು ಇಲ್ಲಿ ಇದ್ದೇನೆ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ತೀರ್ಮಾನ ಮಾಡಿದ್ದೇನೆ ಎಂದ ಅವರು, ತಂದೆ ಸಮಾನರಾದ ಸಿದ್ದರಾಮಯ್ಯ ನವರಿದ್ದಾರೆ, ಭವಿಷ್ಯದ ನಾಯಕರಾದ ಡಿಕೆ ಶಿವಕುಮಾರ್ ಇದ್ದಾರೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇನು ಎಂದು ಹೇಳಿದರು.