ಬೆಂಗಳೂರು:- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ ಆಗಿರುವ ವಿಚಾರವಾಗಿ ಮಾಜಿ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಳೆದು ತೂಗಿ ನಾಯಕತ್ವ ಕೊಟ್ಟಿದ್ದಾರೆ, ಇನ್ನಷ್ಟು ಸಕ್ರಿಯವಾದ ಯಡಿಯೂರಪ್ಪ ಭಾಗಿಯಾಗಲಿದ್ದಾರೆ, ಕೇಂದ್ರದ ಘೋಷಣೆ ತುಂಬು ಹೃದಯದ ಸ್ವಾಗತ.
ಹಳೆ ಚಿಗುರು ಹೊಸಬೇರು ಕೂಡಿರಲು ಮರ ಸೊಬಗು ಎನ್ನುವಂತಹ ಹೊಸತನ ಬರಬೇಕು, ಹಳಬರನ್ನೂ ಒಟ್ಟಿಗೆ ತೆಗೆದುಕೊಂಡ ಹೋಗಲು ಈ ನೇಮಕ ಆಗಿದೆ, ವಿಜಯೇಂದ್ರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಿದ್ದಾರೆ. ವಿಶ್ವಾಸದಿಂದ ಹೋಗಲಿದ್ದಾರೆ. ನಮಗೆ ಪಕ್ಷ, ಸಿದ್ದಾಂತ ಮುಖ್ಯ,ವ್ಯಕ್ತಿ ಅಲ್ಲ.
ಪ್ರತಿಪಕ್ಷ ನಾಯಕನ ಆಯ್ಕೆಯೂ ಶುಕ್ರವಾರ ಆಗಲಿದೆ, ಬಿಜೆಪಿಯವರೇ ಆಯ್ಕೆಯಾಗಲಿದ್ದಾರೆ, ಇದರಲ್ಲಿ ಸಮುದಾಯ ಮುಖ್ಯ ಅಲ್ಲ, ಜಾತಿ ಗಿಂತ ಸದನದಲ್ಲಿ ಆಡಳಿತ ಪಕ್ಷ ಎದುರಿಸಲು ಸಮರ್ಥ ವ್ಯಕ್ತಿ ಆಯ್ಕೆಯಾಗಲಿದೆ, ಗುಟ್ಟುಬಿಡದೆ ಆಯ್ಕೆ ಮಾಡಲಿದೆ ಅದನ್ನೂ ನಾವು ಸ್ವಾಗತ ಮಾಡಲಿದ್ದೇವೆ ಎಂದರು.