ಬೆಂಗಳೂರು:- ವಿಪಕ್ಷ ನಾಯಕನ ಆಯ್ಕೆಯಿಂದ ಬಿಜೆಪಿಯಲ್ಲಿ ಅಸಮಾಧಾನ ವಿಚಾರವಾಗಿ ಶಾಸಕ ಎಸ್ ಆರ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪಕ್ಷದ ತೀರ್ಮಾನದಂತೆ ಶಾಸಕರ ಅಭಿಪ್ರಾಯದಂತೆ ಕೊಟ್ಟಿದ್ದಾರೆ ಅದನ್ನ ನಾವು ಒಪ್ಪಬೇಕು. ಬೆಂಗಳೂರಿನವರಿಗೆ ವಿಪಕ್ಷ ಸ್ಥಾನ ಕೊಟ್ಟಿದ್ದಾರೆ. ಶಾಸಕರಾದಾಗಲಿಂದಲೂ ಮಂತ್ರಿ ಡಿಸಿಎಂ ಎಲ್ಲ ಅವರಿಗೆ ಕೊಡ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲ್ಲ ಉಪೇಕ್ಷೆ ಮಾಡ್ತಾರೆ. ಅವರು ಸರಿಯಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ಪಕ್ಷಕ್ಕೆ ಅವರ ಘನತೆಗೆ ಕುಂದು ಬರುತ್ತೆ ಎಂದರು.
ಯಡಿಯೂರಪ್ಪ ಅವರು ಸಿಎಂ ಆಗಿದ್ರೆ ನಮಗೆ ಈ ದುಸ್ಥಿತಿ ಬರ್ತಿರಲಿಲ್ಲ. ನಾವು ಅಧಿಕಾರ ಪಕ್ಷದಲ್ಲಿ ಇರ್ತಿದ್ವಿ. ಅವರ ಕುಟಂಬ ರಾಜಕಾರಣ ಅಂತೆಲ್ಲ ಮಾತನಾಡಬಾರದು. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷರ ವಿರುದ್ದ ಮಾತನಾಡಿದಷ್ಟು ಅವರಿಗೆ ಡ್ಯಾಮೇಜ್ ಆಗುತ್ತೆ ಎಂದು ತಿಳಿಸಿದರು.