ಚಿಕ್ಕಬಳ್ಳಾಪುರ: ಮೊಬೈಲ್ ಚಟ ಬಿಟ್ಟು ಚೆನ್ನಾಗಿ ಓದು ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಟ್ಟಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ!!! ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ 15 ವರ್ಷದ ಲೋಕೇಶ್ ಎಂದು ತಿಳಿದು ಬಂದಿದೆ.
ಚಿಟ್ಟಾವಲಹಳ್ಳಿ ಗ್ರಾಮದ ಚಾಲಕ ರಾಮಾಂಜಿನಪ್ಪ ಅವರ ಪುತ್ರ ಲೋಕೇಶ್ ಗೌರಿಬಿದನೂರು ನಗರದ ಎಸ್ ಇ ಎಸ್ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ಲೋಕೇಶ್ ಶಾಲೆ ಬಿಟ್ಟ ನಂತರ ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದು ಮೊಬೈಲ್ ಗೇಮ್ ನಲ್ಲಿ ಬ್ಯೂಸಿಯಾಗಿರುತ್ತಿದ್ದನು. ಇದರಿಂದ ಕೋಪಗೊಂಡ ಪೋಷಕರು ಮಗನಿಗೆ ಸಾಕಷ್ಟು ಬಾರೀ ಬುದ್ದಿವಾದ ಹೇಳಿದ್ರು.ಸದ್ಯ ಇಂದು ಭಾನುವಾರ ಹಿನ್ನಲೇ,
ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಇದನ್ನು ಕಂಡ ಪೋಷಕರು ಮೊಬೈಲ್ ಬಿಟ್ಟು ಚೆನ್ನಾಗಿ ಓದು ಮುಂದೆ ಎಸ್ಎಸ್ಎಲ್ ಸಿ ಹೋಗಬೇಕೆಂದು ಒಳ್ಳೆಯ ಉದ್ಯೋಗಕ್ಕೆ ಹೋಗಬೇಕೆಂದು ರೇಗಾಡಿದ್ದಾರೆ.ಇದರಿಂದ ಮನನೊಂದ ಲೋಕೇಶ್ ಮನೆಯಿಂದ ಹೊಲದ ಕಡೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ಮೃತನ ಶವ ಗೌರಿಬಿದನೂರು ಶವಾಗಾರಕ್ಕೆ ರವಾನಿಸಿದ್ದಾರೆ.