ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಅವರೊಂದಿಗೆ ಮದುವೆಯಾಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಅರ್ಮಾನ್ ಹಾಗೂ ಆಶ್ಯಾ ಮದುವೆಯಾಗಿದ್ದು ಮದುವೆಗೆ ತೀರಾ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.
ಜನಪ್ರಿಯ ಫ್ಯಾಷನ್ ಡಿಸೈನರ್ ಜೊತೆಗೆ ಮಾಡೆಲ್ ಕೂಡ ಆಗಿರುವ ಆಶ್ನಾ ಶ್ರಾಫ್ ಅವರ ಜೊತೆಗೆ ಗಾಯಕ ಆಗಸ್ಟ್ 28ರಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದು, ತೂ ಹೀ ಮೇರಾ ಘರ್ (ನೀನೇ ನನ್ನ ಮನೆ) ಎಂದು ಬರೆದುಕೊಂಡಿದ್ದಾರೆ.
ಆಶ್ನಾ ಶ್ರಾಫ್ ಜನಪ್ರಿಯ ಪ್ಯಾಷನ್ ಡಿಸೈನರ್, ಮಾಡೆಲ್ ಮಾತ್ರವಲ್ಲ ಬ್ಯೂಟಿ ಬ್ಲಾಗರ್ ಮತ್ತು ಯೂಟ್ಯೂಬರ್ ಕೂಡ ಹೌದು. 2023 ರ ವರ್ಷದ ಕಾಸ್ಮೋಪಾಲಿಟನ್ ಐಷಾರಾಮಿ ಫ್ಯಾಷನ್ ಪ್ರಭಾವಿ ಎಂದು ಗುರುತಿಸಲ್ಪಟ್ಟಿದ್ದಾರೆ.
ಹಿಂದಿ, ತೆಲುಗು, ಇಂಗ್ಲಿಷ್, ಬೆಂಗಾಲಿ, ಕನ್ನಡ, ಮರಾಠಿ, ತಮಿಳು, ಗುಜರಾತಿ, ಪಂಜಾಬಿ, ಉರ್ದು ಮತ್ತು ಮಲಯಾಳಂ ಮುಂತಾದ ಭಾಷೆಗಳಲ್ಲಿ ಹಾಡಿ ಜನಪ್ರಿಯರಾಗಿದ್ದಾರೆ. ಈವರೆಗೆ 300ಕ್ಕೂ ಹೆಚ್ಚು ಹಾಡುಗಳು ಮತ್ತು 100ಕ್ಕೂ ಹೆಚ್ಚು ಜಿಂಗಲ್ಸ್ ಹಾಡಿ ಅರ್ಮನ್ ಖ್ಯಾತಿ ಘಳಿಸಿದ್ದಾರೆ.
ಮದುವೆಯಲ್ಲಿ ಆಶ್ನಾ ಕಿತ್ತಳೆ ಬಣ್ಣದ ಲೆಹೆಂಗಾದಲ್ಲಿ ಅತ್ಯಂತ ಸುಂದರವಾಗಿ ಕಾಣಸಿದರೆ ಅರ್ಮಾನ್ ತಿಳಿ ಬಣ್ಣದ ಶೆರ್ವಾನಿ ಸೂಟ್ ನಲ್ಲಿ ಮಿಂಚಿದ್ದಾರೆ. ಸದ್ಯ ನವ ಜೋಡಿಗಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.