ಹುಬ್ಬಳ್ಳಿ : ನಗರದ ಗೋಕುಲ ರಸ್ತೆಯಿಂದ ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ಸಂಪರ್ಕ ಕಲ್ಪಿಸುವ ಆರ್.ಎನ್. ಶೆಟ್ಟಿ ರಸ್ತೆ ಕಾಮಗಾರಿ ನಿಲ್ಲಿಸಲಾಗಿದೆಯೆಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಇಂದು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
ಕರ್ನಾಟಕದ ಗ್ಯಾರಂಟಿ ಗಳಿಂದ ಹಣಕಾಸು ಸ್ಥಿತಿ ಗಂಭೀರ: ಸಚಿವೆ ಸೀತಾರಾಮನ್ಗೆ ಯತ್ನಾಳ್ ಮನವಿ!
ಈ ರಸ್ತೆ ನಮ್ಮ ಜೀವನಾಡಿ, ಕಳೆದ ಒಂದು ವರ್ಷದಿಂದ ಇಲ್ಲಿನ ಜನರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕಾಂಗ್ರೆಸ್ನ ಕೆಲ ಮುಖಂಡರು ಈ ರಸ್ತೆ ಕಾಮಗಾರಿಯನ್ನು ನಿಲ್ಲಿಸಲು ಹುನ್ನಾರ ನಡೆಸಿದ್ದಾರೆ ಎಂದು ಸಾರ್ವಜನಿಕರು ಶಾಸಕರ ಬಳಿ ಇದೇ ಸಂದರ್ಭದಲ್ಲಿ ಅಳಲು ತೋಡಿಕೊಂಡರು. ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಕಳೆದ ಒಂದು ವರ್ಷದಿಂದ ಆರ್.ಎನ್. ಶೆಟ್ಟಿ ರಸ್ತೆಗೆ ಸಂಬಂಧಿಸಿದಂತೆ 45 ಬಾರಿ ಜಿಲ್ಲಾಧಿಕಾರಿ, ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತರು, ಲೋಕೋಪಯೋಗಿ ಇಲಾಖೆ ಅಭಿಯಂತರರು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದು ತಿಳಿಸಿದರು.
ರಸ್ತೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಅಲ್ಲದೇ, ಈ ರಸ್ತೆಗೆ ಸಂಬಂಧಿಸಿದಂತೆ ಇದ್ದ ಎಲ್ಲ ಅಡೆತಡೆಗಳನ್ನು ಬೆಂಗಳೂರು ಮಟ್ಟದಲ್ಲಿ ರ್ಚಚಿಸಿ, ಎಲ್ಲ ಅಡತಡೆಯನ್ನು ನಿವಾರಣೆ ಮಾಡಿ ಕೆಲಸ ಪ್ರಾರಂಭ ಮಾಡಿಸಿದ್ದಾಗಿ ಶಾಸಕರು ತಿಳಿಸಿದರು.
ಈ ರಸ್ತೆಯಲ್ಲಿ ಯುಜಿಡಿ ಹಾಗೂ ವಾಟರ್ಲೈನ್ಗಾಗಿ ತಕ್ಷಣ 1 ಕೋಟಿ ರೂ.ಯನ್ನು ತ್ವರಿತವಾಗಿ ಬಿಡುಗಡೆ ಮಾಡಿಸಿ, ಯುಜಿಡಿ ಕಾಮಗಾರಿ ಮಾಡಿಸಿದ್ದನ್ನು ಶಾಸಕ ಟೆಂಗಿನಕಾಯಿ ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಎಲ್ ಆಂಡ್ ಟಿ ಕಾಮಗಾರಿ ಕೂಡ ಮಾಡಿಸಿಕೊಡಲಾಗಿದೆ. ಈಗಲೂ ಇಲ್ಲಿ ಚತುಷ್ಪಥ ರಸ್ತೆ ನಿರ್ಮಿಸುವ ಆಶಯ ಇದೆ. ಮೊದಲು ಈಗಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಂತರ ಚತುಷ್ಪಥ ರಸ್ತೆಗಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಸಲಾಗುವದು ಎಂದು ಹೇಳಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿ ನಿಲ್ಲಿಸುವುದಿಲ್ಲ. ಭೂಸ್ವಾದಿನ ಪ್ರಕ್ರಿಯೆ ಮಾಡಲು ಕ್ರಮ ಕೈಗೊಳ್ಳಾಗುವುದು ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದರು.
ಬ್ಯಾಂಕರ್ಸ್ ಕಾಲನಿ, ಸಹದೇವನಗರ, ಕೇತೇಶ್ವರ ಕಾಲನಿ, ಜಗದೀಶ ನಗರ, ನಾಗಲಿಂಗ ನಗರ ಹಾಗೂ ಸಹಸಾರ್ಜುನ ನಗರ ನಿವಾಸಿಗಳು ಹಾಜರಿದ್ದರು.