ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿ ವೆಂಕಟ್ ದತ್ತ ಸಾಯಿರವರ ಅವರೊಂದಿಗೆ ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ಉದಯಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯರಷ್ಟೇ ಭಾಗಿಯಾಗಿದ್ದರು. ಆ ಬಳಿಕ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೀಗ ನಿನ್ನೆ ಹೈದರಾಬಾದ್ನಲ್ಲಿ ವಿವಾಹ ಅರತಕ್ಷತೆಯು ನಡೆದಿದ್ದು, ಈ ನವ ಜೋಡಿಗೆ ಕುಟುಂಬಸ್ಥರು, ನಟ ಅಜಿತ್ ಕುಮಾರ್ ಸೇರಿ ಹಲವು ತಾರೆಯರು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಗಮಿಸಿ ಶುಭ ಹಾರೈಸಿದ್ದಾರೆ.
ಸಿಂಧು ಮದುವೆ ಆಗ್ತಿರುವ ಹುಡುಗನ ಹೆಸರು ವೆಂಕಟ್ ದತ್ತ ಸಾಯಿ . ಇವರು ಕೂಡ ಮೂಲತಃ ಹೈದರಾಬಾದ್ನವರು. ಉದ್ಯಮಿಯಾಗಿರುವ ವೆಂಕಟ್ ದತ್ತ ಸಾಯಿ, ಸದ್ಯ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ.
ಲಿಬರಲ್ ಸ್ಟಡೀಸ್ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. Flame Universityಯಲ್ಲಿ ಬಿಬಿಎ ಅಕೌಂಟಿಂಗ್ ಮತ್ತು ಫಿನಾನ್ಸ್ ಪದವಿ ಮುಗಿಸಿದ್ದಾರೆ. ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನೊಲಜಿ ಸಂಸ್ಥೆಯಲ್ಲಿ ಸೈನ್ಸ್ ಅಂಡ್ ಮಷಿನ್ ಲರ್ನಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ದಂಪತಿಯ ಹೊಸ ಜೀವನಕ್ಕೆ ಶುಭಾಶಯ ಹಾಗೂ ಆಶೀರ್ವಾದ ತಿಳಿಸಿದ್ದೇನೆ’ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಮದುವೆ ಆದರೆ ವೃತ್ತಿ ಜೀವನ ಅಂತ್ಯ ಎಂದಲ್ಲ. ನಂತರವೂ ಫಿಟ್ ಆಗಿರುವುದು ಹಾಗೂ ಆಟದಲ್ಲಿ ಮುಂದುವರಿಯುವುದು ನನ್ನ ಗುರಿ’ ಎಂದು ಪಿ.ವಿ. ಸಿಂಧು ನಿಶ್ಚಿತಾರ್ಥದ ಸಂದರ್ಭ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.