ಮಾಸ್ಕೋ: ಕಝಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡೋನ್ಗಳ ವಿರುದ್ಧ ರಷ್ಯಾದ ವಾಯುಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ದಕ್ಷಿಣ ರಷ್ಯಾದಿಂದ ಡ್ರೋನ್ಗಳನ್ನು ಹಾರಿಸಿದ ಬಳಿಕ ಕಝಾಕಿಸ್ತಾನ್ನ ಅಕ್ಟೌ ನಗರದ ಬಳಿಕ ಅಜರ್ಬೈಜಾನ್ನ J2-8243 ವಿಮಾನ ಪತನಗೊಂಡಿತು. 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 38 ಮಂದಿ ಸಾವನ್ನಪ್ಪಿದ್ದು, ಉಳಿದ 29 ಮಂದಿ ಗಾಯಗೊಂಡು, ಬದುಕುಳಿದಿದ್ದಾರೆ.
ಇದೀಗ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಕೋರಿದ್ದಾರೆ. ಅಜರ್ಬೈಜಾನ್ ಅಧ್ಯಕ್ಷ ಇಲ್ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ. ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಕ್ರೆಮ್ಲಿನ್ ವರದಿ ಮಾಡಿದೆ.
Supreme Court Recruitment: ಸುಪ್ರೀಂ ಕೋರ್ಟ್ʼನಲ್ಲಿದೆ ಉದ್ಯೋಗಾವಕಾಶ! ಆಸಕ್ತರು ಇವತ್ತೇ ಅಪ್ಲೈ ಮಾಡಿ
ವಿಮಾನ ದುರಂತಕ್ಕೂ ಮುನ್ನ ಅಜರ್ಬೈಜಾನ್ ಏರ್ಲೈನ್ಸ್ಗೆ ಸೇರಿದ ವಿಮಾನವು ಗೋಝಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್ ನಡೆಸಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್ನ ಡೋನ್ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು. ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್ಬೈಜಾನ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.