ಏಲಕ್ಕಿ ಅನೇಕ ರೋಗಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಆಯುರ್ವೇದದಲ್ಲಿ ಅನೇಕ ರೋಗಗಳನ್ನು ಗುಣಪಡಿಸಲು ಇದನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಏಲಕ್ಕಿ ಅನೇಕ ರೀತಿಯ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
HMP ವೈರಸ್ ಹೆಚ್ಚು ಕಾಡೋದು ಈ ವಯಸ್ಸಿನವರಿಗೆ ಮಾತ್ರ: ವೈದ್ಯರು ಹೇಳೋದೇನು?
ಏಲಕ್ಕಿಯು ಒಂದು ಅದ್ಭುತ ಮಸಾಲೆಯಾಗಿದ್ದು, ಆಹಾರಕ್ಕೆ ಉತ್ತಮ ರುಚಿ ಹಾಗೂ ಘಮವನ್ನು ನೀಡುತ್ತದೆ. ಏಲಕ್ಕಿಯನ್ನು ಸಿಹಿ ತಿನಿಸುಗಳಲ್ಲೂ ಬಳಸಲಾಗುತ್ತದೆ. ಈ ಪುಟ್ಟ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ
ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಏಲಕ್ಕಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಈ ಕಾರಣಗಳಿಂದಾಗಿ ಏಲಕ್ಕಿ ಪುಡಿಯನ್ನು ವಿವಿಧ ರೀತಿಯ ಚಹಾಗಳು ಮತ್ತು ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.
ಹಸಿ ಏಲಕ್ಕಿ ಸೇವಿಸುವುದರಿಂದ ದೇಹದಲ್ಲಿ ಊತ, ಗ್ಯಾಸ್ಟ್ರಿಕ್, ಹೊಟ್ಟೆ ನೋವು, ನಿದ್ರಾಹೀನತೆ, ತೂಕ ಇಳಿಕೆಯಂತಹ ವಿವಿಧ ಕಾಯಿಲೆಗಳು ದೂರವಾಗುತ್ತದೆ. ಇದಷ್ಟೇ ಅಲ್ಲದೇ ಇದರ ಬಳಕೆಯೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
ಏಲಕ್ಕಿ ಸೇವನೆಯ ಪ್ರಯೋಜನಗಳೇನು?: ಏಲಕ್ಕಿಯಲ್ಲಿ ಕಂಡು ಬರುವ ಪೋಷಕಾಂಶಗಳ ಕುರಿತಂತೆ ಮಾತನಾಡಿರುವ ವೈದ್ಯ ನಂದು ಪ್ರಸಾದ್, ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಖನಿಜಾಂಶಗಳಿವೆ. ಹಾಗಾದ್ರೆ ಯಾವ ರೀತಿ ಏಲಕ್ಕಿ ಸೇವಿಸಬೇಕು ಎಂದು ತಿಳಿಯೋಣ.
ಪ್ರತಿದಿನ ರಾತ್ರಿ ಮಲಗುವ ಮುನ್ನ ಏಲಕ್ಕಿಯನ್ನು ಬಾಯಿಯೊಳಗೆ ಹಾಕಿಕೊಂಡು ಮಲಗಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ರಾತ್ರಿ ಹೊತ್ತು ಬಾಯಿಯಲ್ಲಿ ಏಲಕ್ಕಿ ಇಟ್ಟುಕೊಂಡು ಮಲಗುವುದರಿಂದ ಅದರ ರಸ ನಿಧಾನವಾಗಿ ಹೊಟ್ಟೆಯೊಳಗೆ ಸೇರುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ನಿದ್ರೆಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ನೀವೇನಾದರೂ ನಿದ್ರಿತ ಸಮಸ್ಯೆಯಿಂದ ಬಳಲುತ್ತಿದ್ದರೆ, ರಾತ್ರಿ ಹೊತ್ತು ಮಲಗುವ ಮುನ್ನ 2 ಹಸಿ ಏಲಕ್ಕಿಯನ್ನು ತಿನ್ನಿ. ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಆಹಾರ ಸೇವಿಸಿದ ನಂತರ ಹಸಿರು ಏಲಕ್ಕಿಯನ್ನು ಮಲಗುವ ಮುನ್ನ ತಿನ್ನಬೇಕು.
ಬ್ಯಾಕ್ಟೀರಿಯಾ ವಿರೋಧಿ ಗುಣಗಳು: ಏಲಕ್ಕಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಹೇರಳವಾಗಿ ಇರುತ್ತವೆ. ಏಲಕ್ಕಿಯನ್ನು ನಿಯಮಿತವಾಗಿ ಬಾಯಿಯಲ್ಲಿ ಇಟ್ಟುಕೊಂಡು ಮಲಗುವುದರಿಂದ ಬಾಯಿಯಲ್ಲಿ ಕಾಯಿಲೆಗಳ ಅಪಾಯ ಕಡಿಮೆ ಆಗುತ್ತದೆ. ಆಂಟಿಮೈಕ್ರೊಬಿಯಲ್ ನಿಂದ ಸಮೃದ್ಧವಾಗಿರುವ ಏಲಕ್ಕಿಯು ಸೋಂಕುಗಳ ವಿರುದ್ಧ ಪರಿಣಾಮಕಾರಿ.
ಹೃದಯವನ್ನು ಆರೋಗ್ಯ: ಏಲಕ್ಕಿಯನ್ನು ರಾತ್ರಿ ಹೊತ್ತು ಬಾಯಿಯೊಳಗೆ ಇಟ್ಟುಕೊಂಡು ಮಲಗುವುದರಿಂದಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ. ಏಲಕ್ಕಿಯನ್ನು ಉತ್ಕರ್ಷಣ ನಿರೋಧಕ ಅಂಶಗಳ ಅತ್ಯುತ್ತಮ ಮೂಲವೆಂದು ಎನ್ನಲಾಗುತ್ತದೆ.