ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಪುಷ್ಪ 2 ಚಿತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಬಿಡುಗಡೆಯಾದ ಆರು ದಿನಗಳಲ್ಲೇ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಡಿಸೆಂಬರ್ 5 ರಂದು ವಿಶ್ವದಾದ್ಯಂತ 1200ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹಿರಿತೆರೆಯಲ್ಲಿ ಪುಷ್ಪರಾಜ್ ಹವಾ ಜೋರಾಗಿದ್ದರೂ ಪುಷ್ಪ 2 OTTಗೆ ಬರಲಿದೆ ಎಂಬ ವದಂತಿ ಜೋರಾಗಿದೆ.
ಇದರ ಬೆನ್ನಲ್ಲೇ ಚಿತ್ರದಲ್ಲಿನ ‘ಧಮ್ಮಿದ್ರೆ ಹಿಡ್ಕೋ ಬಾರೋ ಶೇಖಾವತ’ ಹಾಡಿಗೆ ಆಕ್ಷೇಪಣೆ ಬಂದ ಹಿನ್ನೆಲೆ ಅಲ್ಲು ಅರ್ಜುನ್ ಹಾಡಿದ್ದ ಹಾಡನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಲಾಗಿದೆ. ವಿಲನ್ ಭನ್ವರ್ ಸಿಂಗ್ ಶೇಖಾವತ್ (ಫಹಾದ್ ಫಾಸಿಲ್) ಮತ್ತು ಪುಷ್ಪರಾಜ್ (ಅಲ್ಲು ಅರ್ಜುನ್) ನಡುವಿನ ಸಂಘರ್ಷದ ದೃಶ್ಯಕ್ಕೆ ‘ಧಮ್ಮಿದ್ರೆ ಹಿಡ್ಕೋ ಬಾರೋ ಶೇಖಾವತ’ ಹಾಡಿನ ಮೂಲಕ ಸಿನಿಮಾದಲ್ಲಿ ತೋರಿಸಲಾಗಿತ್ತು.
ಕಪ್ಪು ಬಳೆಯನ್ನು ಏಕೆ ಧರಿಸಬಾರದು..? ಅದನ್ನು ಧರಿಸಿದರೆ ಏನಾಗುತ್ತದೆ..? ಇಲ್ಲಿದೆ ಉತ್ತರ
ಅಲ್ಲು ಅರ್ಜುನ್ ಹಾಡಿದ್ದ ಈ ಹಾಡು ಟ್ರಿಗರ್ ಮಾಡುವ ರೀತಿಯಲ್ಲಿದೆ ಎಂದು ಆಕ್ಷೇಪಣೆ ವ್ಯಕ್ತವಾಗಿದೆ. ಶೇಖಾವತ ಸಮುದಾಯದಿಂದಲೂ ವಿರೋಧ ಬಂದ ಹಿನ್ನೆಲೆ ಈ ಹಾಡನ್ನು ಸೋಶಿಯಲ್ ಮೀಡಿಯಾದಿಂದ ಇದೀಗ ಡಿಲೀಟ್ ಮಾಡಲಾಗಿದೆ. ಇನ್ನೂ ಸಿನಿಮಾದಲ್ಲಿ ಹಾಡನ್ನು ಉಳಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ‘ಧಮ್ಮಿದ್ರೆ ಹಿಡ್ಕೋ ಬಾರೋ ಶೆಖಾವತ’ ಹಾಡನ್ನು ಚಿತ್ರತಂಡ ಡಿಲೀಟ್ ಮಾಡಿಸಿದೆ.