ಕೋಲಾರ/ಅಮರಾವತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯ ಶುದ್ಧೀಕರಣ ಕಾರ್ಯ ಸೋಮವಾರ ನಡೆಯಿತು. ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿದರು. ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದರು. ಟಿಟಿಡಿ ಇಓ ಜೆ ಶ್ಯಾಮಲಾ ರಾವ್ ಈ ಬಗ್ಗೆ ಮಾಹಿತಿ ನೀಡಿದರು. ಇಂದಿನಿAದ ಶ್ರೀನಿವಾಸನ ದೇವಾಲಯದ ಶುದ್ಧೀಕರಣದ ಯಾಗ ನಡೆಯುತ್ತಿದೆ. ಶುದ್ದೀಕರಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಪವಿತ್ರೋತ್ಸವ ಮುಗಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಬೆಳಗ್ಗೆ 6 ಗಂಟೆಯಿಂದ ದೇವಾಲಯ ಪವಿತ್ರೋತ್ಸವ, ಮಹಾಶಾಂತಿ ಯಾಗ ಆರಂಭವಾಯಿತು. ವಿವಿಧ ಪಂಡಿತರು, ವೇದಶಾಸ್ತ್ರ ವಿದ್ವಾಂಸರು ಶುದ್ಧೀಕರಣದಲ್ಲಿ ಭಾಗಿಯಾಗಿದ್ದರು. ತಿರುಪತಿ ತಿರುಮಲದ ಪ್ರಧಾನ ಅರ್ಚಕರು, ಆಗಮ ಪಂಡಿತರಿಂದ ಪವಿತ್ರೋತ್ಸವ ನೆರವೇರಿತು. ದೇವಾಲಯದ ಸುತ್ತ ಸಂಪ್ರೋಕ್ಷಣೆ ಮಾಡಲಾಯಿತು. ಭಕ್ತರ ಮನಸ್ಸಿನಲ್ಲಿರುವ ಅಪವಿತ್ರತೆ ಹೋಗಲಾಡಿಸಲು ಟಿಟಿಡಿಯಿಂದ ಯಾಗ ನಡೆಯಿತು.
Pitru Paksha 2024: ಪಿತೃಪಕ್ಷದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ..! ಪಿತೃ ದೋಷ ಬರುತ್ತೆ!
ದೇವಾಲಯ ಆವರಣದಲ್ಲಿ ವೇದ ಶಾಸ್ತ್ರ ಪಂಡಿತರು, ಆಗಮಿಕರಿಂದ ಮಹಾ ಶಾಂತಿ ಯಾಗ ಜರುಗಿತು. ಯಾಗದಲ್ಲಿ ನೂರಾರು ಆಗಮಿಕರು, ಅರ್ಚಕರು ಭಾಗಿಯಾಗಿದ್ದರು. ಶುದ್ದೀಕರಣ ಬಳಿಕ ಎಂದಿನಂತೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವರ ದರ್ಶನ ಮಾಡಿ ಭಕ್ತರು ಪುನೀತರಾದರು.
ಮೊದಲಿಗೆ ಶಾಂತಿ ಹೋಮ ನಡೆಯಿತು. ಬಳಿಕ ಅರ್ಚಕರು ವಾಸ್ತು ಹೋಮ ನಡೆಸಿದರು. ಹೋಮ ಬಳಿಕ ತುಪ್ಪ ಬಳಕೆ ಮಾಡಿದ್ದ ಸ್ಥಳದಲ್ಲಿ ಸಂಪ್ರೋಕ್ಷಣೆ ಸಿಂಪಡಣೆ ಮಾಡಲಾಯಿತು. ಅನ್ನ ಪ್ರಸಾದ, ಲಡ್ಡು ತಯಾರಿಕೆ ಸ್ಥಳ, ಗೋದಾಮು ಸೇರಿದಂತೆ ಎಲ್ಲೆಡೆ ಸಂಪ್ರೋಕ್ಷಣೆ ಮಾಡಿದರು.
ಹೋಮ, ಯಾಗ, ಶುದ್ಧೀಕರಣದಲ್ಲಿ ಭಾಗಿಯಾಗಿದ್ದ ಅರ್ಚಕರ ತಂಡವನ್ನು ಟಿಟಿಡಿ ಬೀಳ್ಕೊಟ್ಟಿತು. ಎರಡು ಆನೆಗಳ ಸಹಿತ ಅರ್ಚಕರನ್ನು ಬೀಳ್ಕೊಡಲಾಯಿತು. ಮಹಾ ಶಕ್ತಿ ಹೋಮದ ಬಳಿಕ ಹೊಸ ಬಟ್ಟೆ, ಆಭರಣಗಳನ್ನ ಅರ್ಚಕರು ತೊಡಿಸಿದರು. ಶಾಸ್ತ್ರೋಕ್ತವಾಗಿ ಅರ್ಚಕರು ಶಾಂತಿ ಹೋಮ ನೆರವೇರಿಸಿದರು. ಅದರಂತೆ ತಿಮ್ಮಪನಿಗೆ ಹೊಸ ಬಟ್ಟೆ, ಆಭರಣ ತೊಡಿಸಲಾಯಿತು. ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.