ರಾಯಚೂರು : ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ರಾಯಚೂರಿಗೆ ಭೇಟಿ ನೀಡಿದರು. ನಗರದ ಶಾಪಿಂಗ್ ಮಾಲ್ ವೊಂದರ ಉದ್ಘಾಟನೆಗಾಗಿ ನಟಿ ಕೀರ್ತಿ ಸುರೇಶ್ ಆಗಮಿಸಿದ್ದರು. ಇದೇ ವೇಳೆ ಮಾತನಾಡಿರೋ ಕನ್ನಡದ ತಮ್ಮ ಇಷ್ಟದ ನಟ ಮತ್ತು ಕನ್ನಡ ಸಿನಿಮಾಗಳಲ್ಲಿನ ನಟನೆ ಬಗ್ಗೆ ಮಾತನಾಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಕೀರ್ತಿ ಸುರೇಶ್ ನಟಿ ಪುನೀತ್ ರಾಜಕುಮಾರ್ ನನ್ನ ನೆಚ್ಚಿನ ನಟ. ನಾನು ಈ ಹಿಂದೆ ಡಾ.ರಾಜ್ಕುಮಾರ ಅವರನ್ನ ಭೇಟಿ ಮಾಡಿದ್ದೆ, ನನ್ನ ತಾಯಿ ಅವರೊಂದಿಗೆ ನಟಿಸಿದ್ದರು ಎಂದಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಆಫರ್, ಉತ್ತಮ ಸ್ಕ್ರಿಪ್ಟ್ ಬಂದ್ರೆ ಖಂಡಿತ ನಟಿಸುತ್ತೇನೆ ಅಂತ ಹೇಳಿದ್ರು. ಇನ್ನೂ ಈಗಷ್ಟೇ ವೈವಾಹಿಕ ಜೀವನ ಆರಂಭವಾಗಿದೆ, ತುಂಬಾ ಚೆನ್ನಾಗಿ ಸಾಗುತ್ತಿದೆ ಎಂದರು.
ಸದ್ಯ ಕೀರ್ತೀ ಸುರೇಶ್ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬಾಲಿವುಡ್ನಲ್ಲೂ ಸಹ ನಟಿಸಿದ್ದಾರೆ.