ಬೆಂಗಳೂರು: ಪುನೀತ್ ರಾಜಕುಮಾರ್ ರವರ 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಎಲ್ಲೆಡೆ ಅದ್ದೂರಿಯಾಗಿ ಆಚರಿಸಿದ್ದು ಅಭಿಮಾನಿಗಳು ಅವರ ಸಮಾಧಿಗೆ ಹೋಗಿ ಪೂಜೆ ಸಲ್ಲಿಸಿದ್ದಾರೆ
ಹಾಗೆ ಇಂದು ಬೆಂಗಳೂರು ಪೂರ್ವದ ಕರಿಯಣ್ಣನಪಾಳ್ಯದಲ್ಲಿ ಡಾ.ಪುನೀತ್ ಬರ್ತ್ ಡೇ ಸೆಲೆಬ್ರೇಷನ್ ನಡೆದಿದ್ದು ಕರಿಯಣ್ಣನಪಾಳ್ಯದ ಗಂಗಾಂಭಿಕ ಕನ್ಬಡ ಯುವಕರ ಸಂಘದ ವತಿಯಿಂದ ರಕ್ತಧಾನ- ಆರೋಗ್ಯ ಶಿಬಿರ ಕೂಡ ನಡೆಸಲಾಯಿತು.
ಪುನೀತ್ ಬರ್ತ್ ಡೇ ಪ್ರಯುಕ್ತ ರಕ್ತಧಾನ ಮತ್ತು ಉಚಿತ ಆರೋಗ್ಯಶಿಬಿರ ನಡೆದಿದ್ದು ನೂರಾರು ಜನ ಪುನೀತ್ ಮತ್ತು ಡಾ.ರಾಜಕುಮಾರ್ ಅಭಿಮಾನಿಗಳಿಂದ ರಕ್ತಧಾನ ಮಾಡಿದ್ದು ಹಾಗೆ ಆರೋಗ್ಯ ಶಿಬಿರದ ಸೌಲಭ್ಯ ಪಡೆದುಕೊಂಡ ನೂರಾರು ಜನ ಆ ನಂತರ ಸಾವಿರಾರು ಜನಕ್ಕೆ ಅನ್ನಧಾನ ವ್ಯವಸ್ಥೆ ಕೂಡ ಮಾಡಲಾಗಿತ್ತು.