ತುಮಕೂರು:– ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿ ಎಂದು ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರೇ ಪುಲ್ವಾಮ ದಾಳಿ ಮಾಡಿಸಿ ತಮ್ಮ ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ .
ಎಂದು ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.
IPL 2024:ಗೆಲ್ಲುವ ಪಂದ್ಯ ಕೈಚೆಲ್ಲಿದ ಗುಜರಾತ್ – ಪಂಜಾಬ್ ಗೆ 3 ವಿಕೆಟ್ ರೋಚಕ ಗೆಲುವು !
ಇನ್ನು ಬಿಜೆಪಿಯವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿ ರಾಮನ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಯಾಕೆ ಬಿಜೆಪಿ ಹೆಸರಿನಲ್ಲಿ ಮತ ಕೇಳಲು ಆಗುವುದಿಲ್ಲವ ಹಾಗಿದ್ದರೆ ಬಿಜೆಪಿ ಲೆಕ್ಕಕ್ಕಿಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಬರೀ ಹಿಂದೂ ಮುಸ್ಲಿಂ ಗಲಾಟೆ ಮಾಡೋದೆ ಇವರ ಕೆಲಸ. ಮೋದಿ ಬಂದು 10 ವರ್ಷ ಆಯ್ತು, ಒಬ್ಬ ಮುಸ್ಲಿಂ ವ್ಯಕ್ತಿಯನ್ನು ದೇಶದಿಂದ ಓಡಿಸಲು ಆಗಿಲ್ಲ ಎಂದಿದ್ದಾರೆ.
ಈ ಬಾರಿ ರಾಮ ಮಂದಿರ ತೋರಿಸುತ್ತಿದ್ದಾರೆ. ಬರೀ ಹಿಂದೂ ಮುಸ್ಲಿಂ ಗಲಾಟೆ ಮಾಡೋದೆ ಇವರ ಕೆಲಸ. ಮೋದಿ ಬಂದು 10 ವರ್ಷ ಆಯ್ತು, ಒಬ್ಬ ಮುಸ್ಲಿಂ ವ್ಯಕ್ತಿಯನ್ನು ದೇಶದಿಂದ ಓಡಿಸಲು ಆಗಿಲ್ಲ ಎಂದಿದ್ದಾರೆ.
ತುಮಕೂರಿನ ಜನ ಸ್ವಾಭಿಮಾನ ಮಾರಾಟ ಮಾಡಿದ ಪ್ರಕರಣ ಇಲ್ಲ. ಈ ಬಾರಿಯೂ ಯಾರೂ ಸ್ವಾಭಿಮಾನ ಮಾರಿಕೊಳ್ಳಲ್ಲ ಎಂಬ ಭರವಸೆ ಇದೆ. ಬಿಜೆಪಿ ಸಂಸದರು ಯಾರೂ ಒಬ್ಬ ಮೋದಿ ಮುಂದೆ ಗಂಡಸಾಗಿ ನಿಂತಿಲ್ಲ. ಲೋಕಸಭೆಯಲ್ಲಿ ಸಮರ್ಥವಾಗಿ ಎದುರಿಸುವ ಮುದ್ದುಹನುಮೇಗೌಡರಿಗೆ ಮತ ಹಾಕಬೇಕು ಎಂದಿದ್ದಾರೆ.