ಬೆಂಗಳೂರು:- ಆತ ಜೀವನ ನಡೆಸಲು ಪುಡ್ ಡಿಲುವರಿ ಕೆಲಸ ಮಾಡುತ್ತಿದ್ದ ಪ್ರತಿನಿತ್ಯ ಹೋಟೆಲ್ ಗಳಲ್ಲಿ ಪುಡ್ ಪಾರ್ಸಲ್ ಪಡೆದು ಮನೆ ಮನೆಗೆ ಡಿಲುವರಿ ನೀಡುತ್ತಿದ್ದ, ಆದರೆ ಅಂದು ಹೋಟೆಲ್ ನವರು ಪುಡ್ ಕೊಡಲು ತಡ ಮಾಡಿದಕ್ಕೆ ಕನ್ನಡದಲ್ಲಿ ಪ್ರಶ್ನೆ ಮಾಡಿದಕ್ಕೆ ಹೋಟೆಲ್ ನ ನಾಲ್ಕೈದು ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಎಲ್ಲಿ ಯಾಕೆ ಏನಾಯಿತು ಅಂತೀರ ಹಾಗಾದರೆ ಈ ಸ್ಟೋರಿ ನೋಡಿ..
ಹೌದು ಕಳೆದ ಭಾನುವಾರ ರಾತ್ರಿ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಹೆಸರುಘಟ್ಟ ರಸ್ತೆಯ ಹೋಟೆಲ್ ನಲ್ಲಿ ಚಿಕ್ಕಸಂದ್ರ ನಿವಾಸಿ ನವೀನ್ ಎಂಬಾತ ಸ್ವಿಗಿಯಲ್ಲಿ ಪುಡ್ ಡಿಲುವರಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಅಮಾನುಷವಾಗಿ ಹೋಟೆಲ್ ಸಿಬ್ಬಂದಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ. ದಾಸರಹಳ್ಳಿಯ ಗೆಳೆಯರ ಬಳಗದಲ್ಲಿರುವ ಗಬ್ರು ಹೋಟೆಲ್ ನಲ್ಲಿ
ಪುಡ್ ಅರ್ಡರ್ ಕೊಡುವುದು ತಡವಾಗಿದ್ದಕ್ಕೆ ಕನ್ನಡದಲ್ಲಿ ಪ್ರಶ್ನೆ ಮಾಡಿದ ನವೀನ್ ಈ ವೇಳೆ ಮಾತು ಬೆಳೆದು ಏಕಾಏಕಿ ಹೋಟೆಲ್ ಸಿಬ್ಬಂದಿಗಳು ನವೀನ್ ಮೇಲೆ ಹಲ್ಲೆ ಮಾಡಿದ್ದು ಸಿಸಿ ಟಿವಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಹಾಗಿದೆ.
ಇನ್ನೂ ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಹಲ್ಲೆಯನ್ನ ಖಂಡಿಸಿ ಹೋಟೆಲ್ ಕ್ಲೋಸ್ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಿದರು. ಇತ್ತ ಈ ಭಾಗದಲ್ಲಿ ಅನ್ಯ ಭಾಷೆಯಯವರು ಕನ್ನಡಿಗ ಕನ್ನಡದಲ್ಲಿ ಪ್ರಶ್ನೆ ಮಾಡಿದ್ದು, ಹೋಟೆಲ್ ಸಿಬ್ಬಂದಿ ಪುಡ್ ಡಿಲುವರಿಯನ್ನ ತಡ ಮಾಡಿದ್ದು ಅದಲ್ಲದೇ ಕನ್ನಡದಲ್ಲಿ ಮಾತನಾಡುವೆಯಾ ಎಂದು ಅಮಾನುಷವಾಗಿ ಹೋಟೆಲ್ ಸಿಬ್ಬಂದಿಗಳು ಹಲ್ಲೆ ಮಾಡಿರುವುದನ್ನ ಖಂಡಿಸಿದ್ದಾರೆ. ಈ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಬಂಧಿಸುವಂತೆ ಹಾಗೂ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಒಟ್ಟಾರೆ ಇತ್ತೀಚೆಗೆ ಬಡ ಕೂಲಿ ಕಾರ್ಮಿಕರ ಮೇಲೆ ಗಲಾಟೆ ಹಲ್ಲೆ ಜೊತೆಗೆ ಭಾಷೆಯ ವಿಚಾರದಲ್ಲಿ ಹಲ್ಲೆಗಳು ನಡೆಯುತ್ತಿದ್ದು, ಪೋಲಿಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿ ಬಂದಿದೆ. ಇನ್ನೂ ಈ ಪ್ರಕರಣದಲ್ಲಿ ಪುಡ್ ಡಿಲುವರಿ ತಡವಾಗಿದನ್ನ ಕನ್ನಡದಲ್ಲಿ ಪ್ರಶ್ನೆ ಮಾಡಿದಕ್ಕೆ ಡಿಲುವರಿ ಬಾಯ್ ಮೇಲೆ ಅಮಾನುಷವಾಗಿ ಹೋಟೆಲ್ ಸಿಬ್ಬಂದಿಗಳು ಹಲ್ಲೆ ಖಂಡನೀಯವಾಗಿದೆ.