ಶಿಡ್ಲಘಟ್ಟ: ಪಿಎಸ್ಐ ವೇಣುಗೋಪಾಲ್ ಅಧಿಕ ಶಬ್ದ ಉಂಟು ಮಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿ ಸೈಲೆನ್ಸರ್ ಗಳನ್ನು ತೆರವು ಗೊಳಿಸಿದರು. ಮಧ್ಯಾಹ್ನ ನಗರದಲ್ಲಿ ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಹಲವು ಬೈಕ್ ಗಳನ್ನು ತಡೆದು ಬೈಕ್ ಸವಾರಿಂದಲೇ ಆಲ್ಟ್ರೇಷನ್ ಸೈಲೆನ್ಸರ್ಗಳನ್ನು ತೆರವು ಮಾಡಿಸಿದರು. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದರು.
ವಾಹನಗಳಿಗೆ ಸಂಭಂದಿಸಿದ ಅಗತ್ಯ ದಾಖಲೆಗಳೊಂದಿಗೆ ಇನ್ಶೂರೆನ್ಸ್ ಕಡ್ಡಾಯವಾಗಿ ಮಾಡಿಸಬೇಕು ಹಾಗು ಆಲ್ಟ್ರೇಷನ್ ಸೈಲೆನ್ಸರ್ ತೆರವು ಮಾಡುವುಂತೆ ಈ ಹಿಂದೆ ನಗರ ವ್ಯಾಪ್ತಿಯ ವಾಹನ ಸವಾರರಿಗೆ ಹೆಚ್ಚರಿಕೆ ಕೊಟ್ಟಿದ್ದರು. ಎಚ್ಚರಿಕೆಯ ನಂತರವೂ ತೆರವುಗೊಳಿಸದ ವಾಹನಗಳಿಂದ ಅನಗತ್ಯ ಉಪಟಳ ಮುಂದುವೆರದಿತ್ತು. ವಶಕ್ಕೆ ಪಡೆದ ವಾಹನ ಸವಾರರು ಹಾಗು ಸಾರ್ವಜನಿಕರಿಗೆ ಪಿಎಸ್ ಐ ವೇಣುಗೋಪಾಲ್ ಸುರಕ್ಷತಾ ಕ್ರಮಗಳು ಮತ್ತು ಸಂಚಾರ ನಿಯಮಗಳ ಕುರಿತು ತಿಳಿ ಹೇಳಿದರು.