ಬೆಂಗಳೂರು: ಪಿಎಸ್ಐ ಮರುಪರೀಕ್ಷೆ ಪತ್ರಿಕೆ ಲೀಕ್ (PSI exam Scam) ಮಾಡಿದ ಆರೋಪ ಎದುರಿಸುತ್ತಿರುವ ಆಡಿಯೋ ಸೂತ್ರಧಾರ ಸಬ್ ಇನ್ಸ್ಪೆಕ್ಟರ್ ಲಿಂಗಯ್ಯ ವಿಚಾರಣೆ ನಡೆಯುತ್ತಿದ್ದು ತನಿಖೆ ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು
ಎಸ್ ಐ ಲಿಂಗಯ್ಯನನ್ನ ವಿಚಾರಣೆ ನಡೆಸುತ್ತಿರುವ ಪೊಲೀಸರು ಈ ವೇಳೆ ತನ್ನದೇನು ತಪ್ಪೇ ಇಲ್ಲ ಅಂತಾ ಸಮರ್ಥನೆ ಮಾಡಿಕೊಂಡಿರುವ ಲಿಂಗಯ್ಯ ನನ್ನ ಮೇಲೆ ಮಾಡಿರೋದೆಲ್ಲವೂ ಆರೋಪ ನಾನೇನು ಮಾಡಿಲ್ಲ ಅಂತಾ ಸಿಸಿಬಿ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾನೆ.
ಹಾಗೆ ಇದರಲ್ಲಿ ಭಾಗಿಯಾದ ಇನ್ನುಳಿದ ಇಬ್ಬರಿಗೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆದಿರೋ ಸಿಸಿಬಿ ಪವನ್ ಮತ್ತು ರಜತ್ ಎಂಬುವರಿಗೆ ನೊಟೀಸ್ ಕೊಟ್ಟಿದ್ದು ಅವರನ್ನ ವಿಚಾರಣೆ ನಡೆಸಿ ಕೇಸ್ ಸಂಬಂಧ ಮಾಹಿತಿ ಕಲೆ ಹಾಕಲಿರೋ ಸಿಸಿಬಿ ಟೀಂ
ಜನವರಿ 23ಕ್ಕೆ ಪಿಎಸ್ಐ ಪರೀಕ್ಷೆ ನಡೆದಿದ್ದು, ಲಿಂಗಯ್ಯ ಎರಡೂ ಪರೀಕ್ಷೆಗಳ ಬಗ್ಗೆ ಚಾಟಿಂಗ್ ನಡೆಸಿರುವ ಆರೋಪವಿದೆ. ಹೀಗಾಗಿ ಅಜ್ಞಾತ ಸ್ಥಳದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.