ಬೆಂಗಳೂರು:– ಯಾವುದೇ ಅಕ್ರಮ, ಗೊಂದಲವಿಲ್ಲದೆ ಪಿಎಸ್ಐ ಪರೀಕ್ಷೆ ಇಂದು ಸುಗಮವಾಗಿ ನಡೆದಿದೆ.
117 ಸೆಂಟರ್ಗಳಲ್ಲಿ 4,4000 ಅಭ್ಯರ್ಥಿಗಳು ಇಂದು ಪರೀಕ್ಷೆ ಬರೆದಿದ್ದಾರೆ. ಎಕ್ಸಾಮ್ ಸೆಂಟರ್ಗೆ ಫುಲ್ ಶರ್ಟ್ ಧರಿಸಿ ಬಂದ ಅಭ್ಯರ್ಥಿಗಳ ಶರ್ಟ್ ಕಟ್ ಮಾಡಿ ಒಳಗೆ ಬಿಡಲಾಗಿದೆ. ಬೆಲ್ಟ್ ಶೂ ಧರಿಸಿ ಬಂದವರನ್ನೂ ಕೂಡ ಒಳಗೆ ಬಿಟ್ಟಿಲ್ಲ. ಬಳೆ ಧರಿಸಿ ಬಂದ ಮಹಿಳಾ ಅಭ್ಯರ್ಥಿಗಳಿಂದ ಬಳೆ ತೆಗೆಸಲಾಗಿದೆ. ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಹ ಒಳಗೆ ಬಿಟ್ಟಿಲ್ಲ.
ಪರೀಕ್ಷೆ ನಡೆಯುವ ಸೆಂಟರ್ನ 200 ಮೀಟರ್ವರೆಗೆ 144 ಸೆಕ್ಷನ್ ಜಾರಿ ಮಾಡಿ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. 9:30ಕ್ಕೆ ಅಭ್ಯರ್ಥಿಗಳನ್ನು ಎಕ್ಸಾಮ್ ಹಾಲ್ಗೆ ಬಿಟ್ಟು ಎರಡೂ ಪತ್ರಿಕೆಗಳು ಮುಗಿದ ಬಳಿಕ ಮಧ್ಯಾಹ್ನ 2:30ಕ್ಕೆ ಹೊರಗೆ ಬಿಡಲಾಗಿದೆ. ಈ ಮೂಲಕ ಈ ಬಾರಿ ಯಾವುದೇ ಅಕ್ರಮ, ಅನುಮಾನ ಗೊಂದಲಗಳಿಗೆ ಅವಕಾಶ ನೀಡದಂತೆ ಕೆಇಎ ಪರೀಕ್ಷೆ ನಡೆಸಿದೆ.