ಪೀಣ್ಯ ದಾಸರಹಳ್ಳಿ: ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿದ್ದು ಬೆಳಗಾವಿಯಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿ, ಗೂಂಡಾಗಿರಿ ಮಾಡಿರುವಂತಹ ಘಟನೆ ನಡೆದಿದೆ.
ಯುವತಿಯೊಬ್ಬಳು ಮರಾಠಿಯಲ್ಲಿ ಟಿಕೆಟ್ ಕೇಳಿದಾಗ ಕನ್ನಡದಲ್ಲಿ ಮಾತನಾಡುವಂತೆ ಕಂಡಕ್ಟರ್ ಕೇಳಿದ್ದಕ್ಕೆ ಹಲ್ಲೆ ಮಾಡಲಾಗಿದೆ ಇದನ್ನು ಕನ್ನಡಿಗರಾಗಿ ನಾವು ಖಂಡಿಸುತ್ತೇವೆ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್ ಜಗಧೀಶ್ ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯಲ್ಲಿರುವ ಜಯಕರ್ನಾಟಕ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಯುವತಿ ಮರಾಠಿಯಲ್ಲಿ ಕೇಳಿದ್ದಾಳೆ. ಯುವತಿ ಜೊತೆ ಯುವಕ ಪ್ರಯಾಣ ಮಾಡುತ್ತಿದ್ದರಿಂದ 2 ಟಿಕೆಟ್ ಕೇಳಿದ್ದಳು. ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಮಹದೇವ ಹೇಳಿದ್ದಾರೆ.ಈ ವಿಚಾರಕ್ಕೆ ಬಸ್ ನಲ್ಲಿ ಗಲಾಟೆ ಹಾಗಿದೆ ಇದರಿಂದ ಕಂಟಕ್ಟರ್ ಗೆ ಅವಮಾನವಾಗಿದೆ ಇದನ್ನ ನಾವು ರಾಜ್ಯವಾಪ್ತಿ ಖಂಡಿಸುತ್ತೆವೆ ಇದರ ವಿರುದ್ದ ನಮ್ಮ ಸಂಘಟನೆಯಿಂದ ರಾಜ್ಯಾದಾಂದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದರು ನಾವು ಕರ್ನಾಟಕದಲ್ಲಿ ಇದ್ದಿವೊ ಅಥವಾ ಬೇರೆ ರಾಜ್ಯದಲ್ಲಿ ಇದ್ದಿವೊ ಎಂದು ನಮಗೆ ಅನುಮಾನವಾಗಿದೆ ಕರ್ನಾಟಕದಲ್ಲಿ ಕನ್ಮಡಿಗನೇ ಸಾರ್ವಭೌಮ ಎಂದರು.ಎಮ್ ಈ ಎಸ್ ಪುಂಡರ ಹಾವಳಿ ಪ್ರತಿನಿತ್ಯ ಹೆಚ್ಚಾಗುತ್ತದೆ ಇದೇ ರೀತಿ ಮುಂದುವರೆದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಬಿ ಎನ್ ಜಗಧೀಶ್ ತಿಳಿಸಿದರು.