ಚಂಡೀಗಢ: ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವನ್ನಪ್ಪಿದ ಹಿನ್ನೆಲೆ ಪೊಲೀಸರೊಂದಿಗೆ ಘರ್ಷಣೆ ಉಂಟಾಗಿದ್ದು, ಎರಡು ದಿನ ಮೆರವಣಿಗೆ ಬಂದ್ ಮಾಡಲಾಗಿದೆ.
23 ವರ್ಷದ ಶುಭಕರಣ್ ಸಿಂಗ್ ಮೃತ ರೈತ. ಇವರು ಬಟಿಂಡಾ ನಗರದ ನಿವಾಸಿಯಾಗಿದ್ದಾರೆ. ಪೊಲೀಸರು ರೈತರನ್ನು ಚದುರಿಸಲು ಅಶ್ರುವಾಯು ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದರು, ಈ ವೇಳೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ರೈತರೊಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಧರಣಿ, ಸತ್ಯಾಗ್ರಹ ಮುಂದುವರಿಯಲಿದ್ದರೂ ಎರಡು ದಿನಗಳ ಕಾಲ ದೆಹಲಿಗೆ ಬರುವ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ.
ಸದ್ಯ ಮೃತ ರೈತನಿಗೆ ಗುಂಡು ತಗುಲಿದೆ ಎಂದು ಪಟಿಯಾಲ ಆಸ್ಪತ್ರೆಯ (Patiyala H ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದು, ಮರಣೋತ್ತರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ
ಖಾನೌರಿ ಗಡಿ ಪ್ರತಿಘಟನೆಯಲ್ಲಿ ಭಾಗವಹಿಸಿದ್ದ ರೈತರ ಪೈಕಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಒಬ್ಬರು ಆಸ್ಪತ್ರೆಗೆ ಕರೆತರುತ್ತಿದ್ದ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ವಿವರಗಳನ್ನ ಮರಣೋತ್ತರ ಪರೀಕ್ಷೆಯ ಬಳಿಕವೇ ನೀಡಲಾಗುತ್ತದೆ ಎಂದು ಪಟಿಯಾಲದ ರಾಜೇಂದ್ರ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ರೇಖಿ ತಿಳಿಸಿದ್ದಾರೆ.