ಬೆಳಗಾವಿ : ಹಿಂಡಲಗಾ ಜೈಲಿಗೆ ಅಳವಡಿಸಿರೋ 5G ಜಾಮರ್ ತೆಗೆದುಹಾಕುವಂತೆ ಸುತ್ತಮುತ್ತಲ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಂಟು ಗ್ರಾಮಗಳ ಜನರು ಹಿಂಡಲಗಾ ಗ್ರಾಮಸ್ಥರಿಂದ ಜೈಲು ಮುಂದಿನ ರಸ್ತೆ ಬೆಳಗಾವಿ- ಶಿನ್ನೊಳ್ಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೈಲು ಅಧೀಕ್ಷ ಕೃಷ್ಣಮೂರ್ತಿಗ್ರಾಮಸ್ಥರ ಮನವೊಲಿಸಿದ್ದಾರೆ. ಬರುವ ದಿನಗಳ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕಾರ್ಖಾನೆ ನಿರ್ಮಾಣದ ಸಿದ್ಧತೆಗಳನ್ನು ತಕ್ಷಣವೇ ನಿಲ್ಲಿಸಬೇಕು – ಸಿಎಂ ಸಿದ್ದರಾಮಯ್ಯ ಸೂಚನೆ
ಜೈಲಿನಲ್ಲಿ ರಾಜಾತಿಥ್ಯಕ್ಕೆ ಬ್ರೇಕ್ ಹಾಕಲು ಹೋಗಿ ಸ್ಥಳೀಯರಿಗೆ ಸಮಸ್ಯೆಯುಂಟಾಗಿತ್ತು. ಕೈದಿಗಳಿಗೆ ಮೂಗುದಾರ ಹಾಕುವ ಸಲುವಾಗಿ ಜೈಲಿನಲ್ಲಿ ಜಾಮರ್ ಅಳವಡಿಸಲಾಗಿತ್ತು. ಇದರಿಂದಾಗಿ ಎಂಟು ಗ್ರಾಮದ ಜನರ ನೆಮ್ಮದಿ ಹಾಳಾಗಿದೆ. ಜಾಮರ್ ಅಳವಡಿಕೆಯಿಂದ ಸಾರ್ವಜನಿಕರ ಮೊಬೈಲ್ಗೆ ನೆಟ್ವರ್ಕ್ ಸಿಗದೇ ಸಮಸ್ಯೆಯಾಗಿತ್ತು. ಜನರಷ್ಟೇ ಅಲ್ಲ ಪಂಚಾಯಿತಿ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಕೂಡ ನಿತ್ಯದ ಕೆಲಸಕ್ಕೂ ಪರದಾಡುವಂತಾಗಿತ್ತು. ಯಾರಾದರೂ ಸಾವನ್ನಪ್ಪಿದರೂ ಫೋನ್ ಮಾಡಲು ನೆಟ್ವರ್ಕ್ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯ್ತಿ ಸದಸ್ಯರು ಜೈಲಾಧಿಕಾರಿಗಳ ಮುಂದೆ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಜಾಮರ್ ಮಿತಿ ಕಡಿಮೆ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದು, ಅಧಿಕಾರಿಗಳು ಇದಕ್ಕೆ ಸ್ಪಂದಿಸಿದ್ದಾರೆ.