ಆಲೂರು :- ತಾಲೂಕಿನಲ್ಲಿ ಇಂದು ಕ ರ ವೇ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎನ್ ನಾರಾಯಣಗೌಡ ಬಂಧನವನ್ನು ಖಂಡಿಸಿ ತಾಲೂಕು ಘಟಕದಿಂದ ತಾಲೂಕ ಅಧ್ಯಕ್ಷರಾದ ನಟರಾಜ್ ಮತ್ತು ರಘು ಪಾಳ್ಯ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿ ವಾಹಿನಿಯ ಜೊತೆ ಮಾತನಾಡಿದ ತಾಲೂಕ ಅಧ್ಯಕ್ಷರಾದ ನಟರಾಜ ಅವರು ಕಳೆದ ಒಂದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕ ರ ವೇ ರಾಜ್ಯಾಧ್ಯಕ್ಷರಾದ ಟಿ ಎನ್ ನಾರಾಯಣ ಗೌಡ ನೇತೃತ್ವದಲ್ಲಿ ನಡೆದಂತಹ ಕನ್ನಡಭಿಮಾನ ಅಭಿಯಾನ ಜಾತ ಅನ್ಯ ಭಾಷೆಯ ನಾಮಫಲಕವನ್ನು ತೆಗೆಸಿ ಕನ್ನಡ ನಾಮ ಫಲಕ ಹಾಕಬೇಕೆನ್ನುವ ಉದ್ದೇಶದಲ್ಲಿ ಹೊರಟಾಗ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಬಂಧನ ಮಾಡಿದ್ದಾರೆ, ರಾಜ್ಯಾಧ್ಯಕ್ಷ ಟಿ ಎನ್ ನಾರಾಯಣಗೌಡರು ಅವರನ್ನು ಬಂದಿಸಿರುವುದನ್ನು ಖಂಡಿಸುತ್ತೇವೆ ಅವರನ್ನು ಬಿಡುಗಡೆ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಟರಾಜ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ರಘು ಪಾಳ್ಯ, ನಗರ ಅಧ್ಯಕ್ಷರು ಆನಂದ್, ಪಟ್ಟಣ ಪಂಚಾಯತ್ ಸದಸ್ಯರು ತೌಫಿಕ್,ಉಪಾಧ್ಯಕ್ಷರಾದ ಶಶಿನಲ್ಲೂರು ,ಹಾಗೂ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.