ವಿಜಯಪುರ: ಆಲಮಟ್ಟಿ ಡ್ಯಾಂ ಹಾಗೂ ಬಸವ ಸಾಗರದಿಂದ ತೆಲಂಗಾಣಕ್ಕೆ ನೀರು ಬಿಟ್ಟಿದ್ದನ್ನು ವಿರೋಧಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಕ ಡ್ಯಾಂ ಹಿನ್ನೀರಿನಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ತೆಲಂಗಾಣ ಸರ್ಕಾರ ಕುಡಿಯೋಕೆ ಹಾಗೂ ಕೃಷಿಗೆ 5 ಟಿಎಂಸಿ ನೀರು ಕೇಳಿತ್ತು. ಕರ್ನಾಟಕ ಸರ್ಕಾರ ರೈತರಿಗೆ ಮೋಸ ಮಾಡಿ ತೆಲಂಗಾಣಕ್ಕೆ ನೀರು ಬಿಡಲಾಗಿದೆ. ಫೆ.17 ರಿಂದಲೇ ನೀರು ಬಿಡಲಾಗುತ್ತಿದ. ತೆಲಂಗಾಣಕ್ಕೆ 10 ಟಿಎಂಸಿ ನೀರು ಅಕ್ರಮವಾಗಿ ಕದ್ದು ಬಿಟ್ಟಿದ್ದಾರ. ಅಧಿಕಾರಿಗಳು 1.27 ಟಿಎಂಸಿ ನೀರು ಮಾತ್ರ ಬಿಟ್ಟಿದ್ದಾಗಿ ಸುಳ್ಳು ಹೇಳಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ವಿರೋಧದ ಮಧ್ಯೆಯೂ ಆಲಮಟ್ಟಿ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಬಿಡುಗಡೆ
ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ತೆಲಂಗಾಣ ವಿರೋಧ ಮಾಡಿ ಕೋರ್ಟ್ ಮೊರೆ ಹೋಗಿದ. ಅಂಥ ರಾಜ್ಯಕ್ಕೆ ರಾಜ್ಯದಿಂದ ನೀರು ಬಿಟ್ಟಿದ್ದು ತಪ್ಪು, ತೆಲಂಗಾಣಕ್ಕೆ ನೀರು ಬಿಡಬಾರದು ಎಂದು ಒತ್ತಾಯ ಮಾಡಿದರು. ಹೀಗಾಗಿ ಆಲಮಟ್ಟಿ ಡ್ಯಾಂ ಹಿನ್ನೀರಿನಲ್ಲಿ ಉತ್ತರ ಕ್ರಿಯೆ ಮಾಡಿ ಶ್ರದ್ದಾಂಜಲಿ ಮಾಡಿದ್ದೇವೆ. ತೆಲಂಗಾಣದ ಮೇಲೆ ಪ್ರೀತಿ ಇದ್ದರೆ ತೆಲಂಗಾಣದ ಕ್ಷೇತ್ರಗಳಿಂದ ಸ್ಪರ್ಧೆ ಮಾಡ. ತೆಲಂಗಾಣದಿಂದಲೇ ರಾಜಕಾರಣ ಮಾಡಿ ರಾಜ್ಯ ಬಿಟ್ಟು ತೊಲಗಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನೀರು ನಿಲ್ಲಿಸದಿದ್ದರೆ ಕೆಬಿಜೆಎನ್ಎಲ್ ಕಚೇರಿಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆಂದು ಅಕ್ರೋಶ ಹೊರ ಹಾಕಿದರು.