ಬೋಸ್ಟನ್: ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ನೀತಿಗಳ ವಿರುದ್ಧ ಅಮೆರಿಕದ ಕೆಲವೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ‘ಫ್ರೆಸಿಡೆಂಟ್ಸ್ ‘ದಿನವಾದ ನಿನ್ನೆ ಬೋಸ್ಟನ್ ಸೇರಿದಂತೆ ಕೆಲವಡೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಡೊನಾಲ್ಡ್ ಟ್ರಂಪ್ ಹಾಗೂ ಎಲೋನ್ ಮಸ್ಕ್ ಅವರ ಜನ ವಿರೋಧಿ ನೀತಿಗಳನ್ನು ಖಂಡಿಸಿ ಭೀದಿಗಿಳಿದು ಹೋರಾಟ ನಡೆಸಿದ್ದಾರೆ.
ಅಧ್ಯಕ್ಷರ ದಿನದಂದು ರಾಜರಿಲ್ಲ” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಫೆಡರಲ್ ವಲಸೆ ಜಾರಿ ಮಸೂದೆ ವಿರೋಧಿಸಿ ಅರಿಜೋನಾ ಸ್ಟೇಟ್ ಹೌಸ್ ಗೆ ನುಗ್ಗಲು ಪ್ರಯತ್ನಿಸಿದರು. ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನೂರಾರು ಪ್ರತಿಭಟನಾಕಾರರು “ನನ್ನ ಅಧ್ಯಕ್ಷರ ದಿನವಲ್ಲ” ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸಹಸ್ತಾರು ಜನರು ಸೇರಿ ‘No Kings’ ಥೀಮ್ ಅಡಿ ಪ್ರತಿಭಟನೆ ಆಯೋಜಿಸಿದ್ದರು. ಎರಡು ವಾರಗಳಲ್ಲಿ ಅಮೆರಿಕದಾದ್ಯಂತ ನಡೆದ ಅತ್ಯಂತ ಎರಡನೇ ದೊಡ್ಡ ಪ್ರತಿಭಟನೆ ಇದಾಗಿದೆ. ಈ ಹಿಂದೆ ಫೆಬ್ರವರಿ 5 ರಂದು ಇದೇ ರೀತಿಯ ಬೃಹತ್ ಪ್ರತಿಭಟನೆ ನಡೆದಿತ್ತು. ಎರಡೂ ಪ್ರತಿಭಟನೆಗಳಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಎಲೋನ್ ಮಸ್ಕನ್ ಅವರ ನೀತಿಗಳನ್ನು ಖಂಡಿದ್ದರು.
ಬೋಸ್ಟನ್ ನಿಂದ ಸ್ಟೇಟ್ ಹೌಸ್ ನಿಂದ ಸಿಟಿ ಹಾಲ್ ವರೆಗೂ ಸುಮಾರು 1,000 ಜನರು ಪ್ರತಿಭಟನಾ ಮೆರಣಿಗೆ ನಡೆಸಿದ್ದು, ಎಲೋನ್ ಮಾಸ್ಕ್ ತೊಲಗಬೇಕು ಮತ್ತಿತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.