ಕುರುಗೋಡು:- ಇಂದು ಕೋಳೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡಿರುವುದನ್ನು ವಿರೋಧಿಸಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಕಾಂಗ್ರೆಸ್ ಸೇರ್ತಾರಾ ಕರಡಿ ಸಂಗಣ್ಣ – “ಕೈ” ಶಾಸಕರ ಭೇಟಿ ಬೆನ್ನಲ್ಲೇ ಹೆಚ್ಚಾಯ್ತು ಕುತೂಹಲ!
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡುತ್ತಾ ಇಡೀ ದೇಶದಾದ್ಯಂತ ಕೂಲಿ ಕಾರ್ಮಿಕರು ನಡೆಸಿದ ಹಲವಾರು ಹೋರಾಟದ ಫಲವಾಗಿ ಈ ಬಾರಿ 349 ರೂ ಗಳನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಂಡಿದ್ದಾರೆ, ಇಲ್ಲಿನ ಆಡಳಿತ ವ್ಯವಸ್ಥೆ ಈ ದುಡಿಯುವ ಜನರಿಗೆ ಅವರ ದುಡಿಮೆಯ ಫಲವನ್ನು ಸಂಪೂರ್ಣವಾಗಿ ಅವರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕಾದದ್ದು ಇವರ ಪ್ರಮುಖ ಜವಾಬ್ದಾರಿ ಎಂಬುದು ಎಲ್ಲಾರಿಗೂ ತಿಳಿದ ವಿಷಯ, ಆದರೆ ಇದರಲ್ಲಿಯೂ ಸಹ ಹಲವಾರು ವ್ಯತ್ಯಾಸಗಳು ಕಂಡು ಬಂದು ಈ ಕಾರ್ಮಿಕರಿಗೆ ಅತೀ ಕಡಿಮೆ ( ಹೆಚ್ಚು-ಕಡಿಮೆ 100 ರೂ) ಕೂಲಿ ನೀಡಿರುವುದು ಇವರನ್ನು ವಂಚಿಸಿದಂತಾಗಿದೆ.
ಜೊತೆಗೇ ದಿನದಿಂದ ದಿನಕ್ಕೆ ಈ ಭಾಗದಲ್ಲಿ ಬಿಸಿಲು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ, ಹಲವಾರು ಜನ ವೈದ್ಯರು ಈಗಾಗಲೇ ಬಿಸಿಲಿಗೆ ಜನರು ಹೊರಗಡೆ ಬರಬಾರದೆಂದು ಸೂಚನೆ ನೀಡಿದ್ದಾರೆ, ಆದರೆ ಇಲ್ಲಿನ ಆಳ್ವಿಕರು ಇದನ್ನು ಪರಿಗಣಿಸದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ, ಹಾಗಾಗಿ ಈ ಕೂಡಲೇ ಸಂಪೂರ್ಣ ಕೂಲಿಯನ್ನು ನೀಡಿ, ಕೆಲಸದ ಸಮಯವನ್ನು ಬದಲಾಯಿಸಿ, ಜನರ ಪರವಾಗಿ ನೀತಿ ರೂಪಿಸಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷ ಬಸಣ್ಣ ಅವರು ಮಾತನಾಡುತ್ತಾ ಸಂಪೂರ್ಣ ಕೂಲಿ 349 ಈ ಕೂಡಲೇ ಎಲ್ಲಾ ಕಾರ್ಮಿಕರಿಗೆ ನೀಡಬೇಕು, ಕೆಲಸದ ಸಮಯವನ್ನು ಬದಲಾಯಿಸಿ, ಜನರಿಗೆ ಅನುಕೂಲವಾಗುವಂತೆ ಬದಲಾಯಿಸಬೇಕು, ಕೆಲಸದ ಸ್ಥಳ ಒಂದು ಕಡೆ, ಜಿ.ಪಿ.ಎಸ್ ಬೇರೊಂದು ಕಡೆ ಆಗುತ್ತಿರುವುದನ್ನು ತಪ್ಪಿಸಬೇಕು ಮತ್ತು ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು ಸೇರಿದಂತೆ ಈ ಯೋಜನೆಯಲ್ಲಿ ಬರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದರು
ಈ ಸಂದರ್ಭದಲ್ಲಿ ಯುವಜನ ಮುಖಂಡ ಕೋಳೂರು ಪಂಪಾಪತಿ, ಮಾತಾನಾಡಿದರು.
ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ರೈತರಾದ ರವಿಚಂದ್ರ, ,ವೀರೇಶ, ದೊಡ್ಡಬಸವ, ರೆಹಮಾನ್ , ರಾಜಶೇಖರ್, ಶೇಖರ್, ತಿಪ್ಪೇಸ್ವಾಮ್ಮಿ , ವಸಗೇರಿ ತಿಪ್ಪೇಸ್ವಾಮಿ,ಗಾದಿಲಿಂಗ,
ರಾಜಮ್ಮಾ, ಮಲ್ಲಮ್ಮ, ಶಿವಮ್ಮ, ಗುರುಶೇಕರ್ ,
ನಿಂಗಮ್ಮ ಸೇರಿದಂತೆ ಇತರರು ಇದ್ದರು.