ಹುಬ್ಬಳ್ಳಿ ಸಂಸತ್ ಅವೇಶನದಲ್ಲಿ ಸಂವಿಧಾನದ ಕುರಿತು ನಡೆದ ಚರ್ಚೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡೆ ಖಂಡಿಸಿ ಹಾಗೂ ಅವರ ವಜಾಕ್ಕೆ ಆಗ್ರಹಿಸಿ ಜನವರಿ 9 ರಂದು ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಹುಬ್ಬಳ್ಳಿ – ಧಾರವಾಡ ಬಂದ್ಗೆ ಕರೆ ನೀಡಲಾಗಿದ್ದು ನಾಳಿನ ಬಂದ್ ವೇಳೆ ಏನು ಇರಲ್ಲ ಏನು ಇರಲ್ಲ ಇಲ್ಲಿದೆ ಮಾಹಿತಿ.
ವಿವಿಧ ಸಂಘಟನೆಯ ಕಾರ್ಯಕರ್ತರು ಆಯಾ ಕಾಲೋನಿ ಹಾಗೂ ಬಡಾವಣೆಗಳಿಂದ ಮೆರವಣಿಗೆ ಮೂಲಕ ಹುಬ್ಬಳ್ಳಿಯ ಚನ್ನಮ್ಮ ವೃತ್ತಕ್ಕೆ ಹಾಗೂ ಧಾರವಾಡ ಜುಬ್ಲಿ ವೃತ್ತಕ್ಕೆ ಆಗಮಿಸಿ ಸಮಾವೇಶಗೊಳ್ಳಲಿವೆ.
ಸಾರ್ವಜನಿಕರು ಮತ್ತು ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆಗಳು, ಔಷಧ ಮಳಿಗೆಗಳು, ಆಂಬ್ಯುಲೆನ್ಸ್ಗಳು ಮತ್ತು ಹಾಲಿನ ವಾಹನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಆದರೆ ಇತರೆ ಯಾವುದೇ ವಾಹನ ಸಂಚಾರ ಮತ್ತು ವಾಣಿಜ್ಯ ವ್ಯವಹಾರಗಳು, ಹೋಟೆಲ್, ಸಿನಿಮಾ, ಆಟೋ, ಶಾಲಾ -ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿಗಳು ಕಾರ್ಯ ನಿರ್ವಹಿಸದಂತೆ ತಡೆಯಲಾಗುವುದು. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಬಂದ್ಗೆ ನೀಡುವ ಸಾಧ್ಯತೆ ಇದೆ.
ಸೇವೆ ಇವು ಇವೆ
ಆಸ್ಪತ್ರೆ
ಔಷಧ ಅಂಗಡಿ
ಆಂಬ್ಯುಲೆನ್ಸ್
ಹಾಲಿನ ವಾಹನ ಸೇವೆ
ಯಾವೆಲ್ಲಾ ಸೇವೆ ಅಲಭ್ಯ ಸಾಧ್ಯತೆ?
ವಾಹನ ಸಂಚಾರ
ವಾಣಿಜ್ಯ ವ್ಯವಹಾರ
ಹೋಟೆಲ್
ಸಿನಿಮಾ ಮಂದಿರ.
ಆಟೋ
ಶಾಲೆ – ಕಾಲೇಜು
ಸರಕಾರಿ – ಖಾಸಗಿ ಕಚೇರಿ