ಗದಗ:- ಡಾ. ಬಾಬಾಸಾಹೇಬ ಅಂಬೇಡ್ಕರ್ ಕುರಿತು ಲೋಕಸಭೆಯಲ್ಲಿ ಕೆಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನ ಖಂಡಿಸಿ ಇಂದು ಬಂದ್ ಗೆ ಕರೆ ಕೊಡಲಾಗಿದೆ.
ದಲಿತ ಸಂಘರ್ಷ ಸಮಿತಿ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆಯಿಂದ ಬಂದ್ ಗೆ ಕರೆ ಕೊಡಲಾಗಿದೆ.
Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ! ಎಲ್ಲೆಲ್ಲಿ?
ಗದಗ-ಬೆಟಗೇರಿ ಅವಳಿ ನಗರ ಬಂದ್ ಆಗಲಿದ್ದು, ಇಂದು ಬೆಳಿಗ್ಗೆ 6 ಘಂಟೆಯಿಂದ ಸಂಜೆ 5 ಘಂಟೆ ವರೆಗೆ ಪ್ರತಿಭಟನೆ ನಡೆಯಲಿದೆ.
ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಂದ್ ಕರೆ ಹಿನ್ನೆಲೆ ಬಸ್ ಗಳು ನಗರ ಪ್ರವೇಶಿಸದಂತೆ ಆದೇಶ ಹೊರಡಿಸಲಾಗಿದೆ. ಗದಗ ಪ್ರವೇಶ ಸ್ಥಳಗಳಿಂದಲೇ ಬಸ್ ಕಾರ್ಯಾಚರಣೆಗೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇನ್ನೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಕುರಿತು ಕೆಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನ ಖಂಡಿಸಿ ಗದಗ-ಬೆಟಗೇರಿ ಅವಳಿ ನಗರ ಬಂದ್ ಕರೆ ಹಿನ್ನೆಲೆ ಗದಗ ನಗರದ ಮುಳಗುಂದ ನಾಕಾದಲ್ಲಿ ಪ್ರತಿಭಟನಾಕಾರರು ಜಮಾವಣೆ ಆಗುತ್ತಿದ್ದಾರೆ. ಬಂದ್ ಕರೆ ಹಿನ್ನೆಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.