ಚಾಮರಾಜನಗರ: ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನ ಹಿಂದುಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೇಗೂರು ಮಾರ್ಗವಾಗಿ ಕೆಎ 09 – ಸಿ 0111 ನೋಂದಣಿಯ ಅಶೋಕ್ ಲೈಲ್ಯಾನ್ಡ್ ಮಿನಿ ವಾಹನದಲ್ಲಿ ಗೌಪ್ಯವಾಗಿ ಸಾಗಿಸುತ್ತಿದ್ದ,
ವೇಳೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ನಂಜುಂಡ, ಅಣ್ಣಯ್ಯ ಇತರರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ನಂತರ ಬೇಗೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಕುರಿತಂತೆ ಬೇಗೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.