ರಾಮನಗರ:– ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಅಂಥೇಮ್ ಬಯೋ ಸೈನ್ಸಸ್ ಕಾರ್ಖಾನೆಯ ಸಭಾಂಗಣದಲ್ಲಿ ಜಿಲ್ಲಾ ಪರಿಸರ ಇಲಾಖೆ ಮತ್ತು ಅಂಥೇಮ್ ಬಯೋ ಸೈನ್ಸಸ್ ಕಾರ್ಖಾನೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಓಜೋನ್ ದಿನಾಚರಣೆ ಪ್ರಯುಕ್ತ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಎಲ್ಲಾ ಕಾರ್ಖಾನೆಗಳ ಪ್ರತಿನಿಧಿಗಳಿಗೆ ನಡೆದ ಓಜೋನ್ ಪದರ ರಕ್ಷಣೆ ಕುರಿತು ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್ ರವರು.
Hubballi:ಅನ್ನದಾತನ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು: ಬಸನಗೌಡ್ರ ಮನವಿ!
ಓಜೋನ್ ಪದರವು ಭೂಮಿಯ ಮೇಲ್ಮೈಯಲ್ಲಿ ಇಲ್ಲದಿದ್ದರೆ ನಾವು ಊಹಿಸಲು ಆಗುತ್ತಿರಲಿಲ್ಲ ಅಂತಹ ವಾತಾವರಣ ಸೃಷ್ಟಿಯಾಗುತ್ತಿತ್ತು ಸೂರ್ಯನ ನೇರಳಾತೀತ ಕಿರಣಗಳಿಂದ ಕ್ಯಾನ್ಸರ್ ಸೇರಿದಂತೆ ಇತರ ರೋಗಗಳು ಹರಡಿ ಜನ ಜಾನುವಾರು ಪ್ರಕೃತಿ ಹೇಳ ಹೆಸರಿಲ್ಲದಂತಾಗುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದರು.
ಇಂಗಾಲ ಹೆಚ್ಚಾಗಿ 1985ರಲ್ಲಿ ಓಜೋನ್ ಪದರ ಹಾಳಾಗುತ್ತಿದ್ದನ್ನು ಗಮನಿಸಿದ ಅಂದಿನ ವಿಜ್ಞಾನಿಗಳು ಓಜೋನ್ ಪದರ ರಕ್ಷಣೆ ಮಾಡದಿದ್ದರೆ ನಮ್ಮೆಲ್ಲರ ವಿನಾಶ ಖಚಿತ ಎಂದು ದೃಢಪಡಿಸಿದ ಹಿನ್ನೆಲೆಯಲ್ಲಿ ಅಂದು 193 ದೇಶಗಳು ಒಂದಾಗಿ ಓಜೋನ್ ಪದರ ರಕ್ಷಣೆಗೆ ಕರಾರು ಪತ್ರಕ್ಕೆ ಸಹಿ ಹಾಕಿ ಓಜೋನ್ ಪದರ ಹಾಳಾಗುವ ಉತ್ಪನ್ನಗಳನ್ನು ಉತ್ಪತ್ತಿ ಮಾಡುವುದಿಲ್ಲ ಎಂದು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಿದರು.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಕಾರ್ಖಾನೆಗಳು ಹಲವಾರು ರೀತಿಯ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿದ್ದು ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಪರಿಸರಕ್ಕೆ ಹಾನಿಯಾಗುವಂತಹ ವಿಷವನ್ನು ಆಚೆ ಬಿಡಬಾರದು ಹಾಗೂ ಓಜೋನ್ ಪದರ ರಕ್ಷಣೆಗೆ ನಾವೆಲ್ಲರೂ ಟೊಂಕ ಕಟ್ಟಿ ನಿಲ್ಲಬೇಕಾಗಿದೆ ಎಂದು ಹೇಳಿದರು.
ಒಂದು ಕ್ಲೋರಿನ್ ಓಜೋನ್ ಪದರದ 100 ಕಣಗಳನ್ನು ಹಾಳುಮಾಡುತ್ತದೆ 2050ರ ವೇಳೆಗೆ ಓಜೋನ್ ಪದರವನ್ನು ನಾವು ಮತ್ತೆ ಹೊಸ ರೂಪವನ್ನು ಪಡೆಯುವಂತೆ ಮಾಡಬೇಕಾಗಿದೆ ಎಂಬ ಗುರಿಯನ್ನು ಹಾಕಿಕೊಳ್ಳಲಾಗಿದ್ದು ವಿಶ್ವದ್ಯಂತ ಇದಕ್ಕಾಗಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜು, ಹಾರೋಹಳ್ಳಿ ಅಂಥೇಮ್ ಬಯೋ ಸೈನ್ಸಸ್ ಅಧಿಕಾರಿಗಳಾದ ವಿಜಯ್ ಕೈವಾರ, ಅಶೋಕ್ ಎಚ್, ಪ್ರಸಾದ್ ಸ್ಯಾಂಡಲಿಯ ಬಿ ಆರ್, ಸಜಿತ್ ಸಹದೇವನ್, ರಾಘವೇಂದ್ರ, ಕಪಿನಿ ಗೌಡ, ಎಸ್ ಸುನಿಲ್ ಕುಮಾರ್, ಶಂಕರ್ ಆರ್, ರಾಮಕೃಷ್ಣನ್ ಬಿ ಜಿ, ಮಹಿಮಾ, ಪರಿಸರ ಇಲಾಖೆ ಸಲಹೆಗಾರರಾದ ಮನೋಹರ್, ಕಾವ್ಯಮಹೇಶ್ ಮಹಿಮಾ, ಸೇರಿದಂತೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ 300 ಜನ ಪ್ರತಿನಿಧಿಗಳು ಹಾಜರಿದ್ದರು.
ಹಾರೋಹಳ್ಳಿ ಪಟ್ಟಣದ ಕೈಗಾರಿಕಾ ಪ್ರದೇಶದ ಅಂಥೇಮ್ ಬಯೋ ಸೈನ್ಸೆಸ್ ಸಭಾಂಗಣದಲ್ಲಿ ವಿಶ್ವ ಓಜೋನ್ ದಿನಾಚರಣೆ ಅಂಗವಾಗಿ ಕಾರ್ಯಗಾರ ನಡೆಯಿತು. ಸಿ.ಆರ್ ಮಂಜುನಾಥ್, ವಿಜಯ ಕೈವಾರ, ಅಶೋಕ್ ಹೆಚ್, ಸಜಿತ್ ಸಹದೇವನ್, ಶಂಕರ್ ಆರ್, ರಾಮಕೃಷ್ಣನ್ ಬಿ ಜಿ ಇತರರು ಇದ್ದರು.