ತುಮಕೂರು: ತುಮಕೂರಿನ ರೈಲ್ವೇ ನಿಲ್ದಾಣಕ್ಕೆ ತ್ರಿವಿಧದಾಸೋಹಿ ಶಿವಕುಮಾರ ಶ್ರೀಗಳ ಹೆಸರಿಡಲು ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ.ಸದ್ಯದಲ್ಲೇ ಅಧಿಕೃತವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅದಕ್ಕೆ ಚಾಲನೆ ಕೊಡ್ತಾರೆ. ಸದ್ಯ ಮೂರು ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣವನ್ನ ಅಭಿವೃದ್ಧಿ ಮಾಡಲಾಗ್ತಿದೆ. ನಡೆದಾಡುವ ದೇವರ ಹೆಸರು ಆ ರೈಲ್ವೆ ನಿಲ್ದಾಣದಲ್ಲಿ ಇರಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ತ್ರಿವಿಧ ದಾಸೋಹಿಗೆ 6ನೇ ಪುಣ್ಯಸ್ಮರಣೆ: ಇಂದು ಸಿದ್ಧಗಂಗಾ ಮಠದಲ್ಲಿ ಸಂಸ್ಮರಣೋತ್ಸವ!
ತುಮಕೂರಿನಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ 6 ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ನಡೆದಾಡುವ ದೇವರು ಈ ರಾಷ್ಟ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ದನಿ ಇಲ್ಲಸವರಿಗೆ ದನಿಯಾಗಿ, ತ್ರಿವಿಧ ದಾಸೋಹ ಕೊಟ್ಟಿದ್ದಾರೆ. ಇಡೀ ವಿಶ್ವಕ್ಕೆ ಮಾದರಿಯಾಗಿ ದೇಹ ತ್ಯಾಗ ಮಾಡಿದ್ದಾರೆ. ಸೂರ್ಯ ಚಂದ್ರ ಇರೋವರೆಗೂ ಇಡೀ ಭೂಪಟದಲ್ಲಿ ಶಿವಕುಮಾರ್ ಶ್ರೀಗಳ ಹೆಸರು ಇರುತ್ತದೆ. ಕಸ್ತೂರಿ ಮಾತ್ರೆ ಮಾರುತಿದ್ದ ಈ ಸಾಮಾನ್ಯ ಸೋಮಣ್ಣ ಈ ಮಟ್ಟಕ್ಕೆ ಬೆಳೆಯಲು ಸಿದ್ದಗಂಗಾ ಮಠ ಕಾರಣ. ದಾಸೋಹ ದಿನ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಆ ಘೋಷಣೆ ಘೋಷಣೆ ಆಗಿಯೇ ಉಳಿದಿದೆ. ಆದರೆ ಈ ಸರ್ಕಾರ ಅದನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿಲ್ಲ. ಈ ಬಗ್ಗೆ ಸಿಎಂ, ಜಿ ಪರಮೇಶ್ವರ್, ಕೆ ಎನ್ ರಾಜಣ್ಣಗೆ ಪತ್ರ ಬರೆಯುತ್ತೇನೆ. ದಾಸೋಹ ದಿನವನ್ನು ಇಡೀ ರಾಜ್ಯದಲ್ಲಿ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.