ಬೆಳಗಾವಿ:– ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರುತ್ತಾರೆ. ಒಬ್ಬರು ಆಯ್ಕೆಯಾದಾಗ ಹೀಗೆ ಹೇಳುತ್ತಾರೆ. ಹಾಗೇ ಕಾಂಗ್ರೆಸ್ನಲ್ಲೂ ಡಿಕೆಶಿ ಸಿದ್ದರಾಮಯ್ಯ, ಪರಮೇಶ್ವರ ಸಿದ್ದರಾಮಯ್ಯ ಪರ ವಿರೋಧ ಇದೆ. ಇವೆಲ್ಲವೂ ರಾಜಕಾರಣದಲ್ಲಿ ಕಾಮನ್ ಎಂದರು.
ಸಭಾತ್ಯಾಗ ವಿಚಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ ಅವರು ನನ್ನ ಹತ್ತಿರ ಬಂದು ಹೇಳಿದರು. ಪ್ರತಿದಿನ ಧರಣಿ ಮಾಡಿದರೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಆಗಲ್ಲ. ನೀವು ಸದನದ ಬಾವಿಗೆ ಇಳಿದರೆ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು.
ಉತ್ತರ ಕರ್ನಾಟಕದ ಬಗ್ಗೆ ನಾನು ಮಾತಾಡಬೇಕು. ಹೀಗಾಗಿ ಧರಣಿ ಬೇಡ ಎಂದು ಯತ್ನಾಳ ಹೇಳಿದರು. ನಾನು ಅದಕ್ಕೆ ಮುಂದಿರುವವರನ್ನು ಕರೆದು ಚರ್ಚೆ ಮಾಡಿದೆ. ಇದರಿಂದ ಹಿಂದಿರೋರು ಮುಂದಿರೋರರ ಮಧ್ಯೆ ಕಮ್ಯೂನಿಕೇಷನ್ಸ್ ಗ್ಯಾಪ್ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ದೂರನ್ನು ತಿರುಚುವ ಪ್ರಯತ್ನ ಪೊಲೀಸ್ ಮಾಡಿದ್ದಾರೆ. ನಾವು ಕೊಟ್ಟ ದೂರನ್ನು ತಮಗೆಷ್ಟು ಬೇಕು ಅಷ್ಟು ತಗೊಂಡಿದ್ದಾರೆ. ಸದನದಲ್ಲಿ ಏನ್ ಬೇಕಿದೆ ಅಷ್ಟು ಮಾತ್ರ ಗೃಹ ಸಚಿವರು ಓದಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದರು.