ನವದೆಹಲಿ: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಪ್ರಿಯಾಂಕ ಗಾಂಧಿ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಪ್ರಿಯಾಂಕ ಗಾಂಧಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ನಾಂದೇಡ್ ಉಪಚುನಾವಣೆಯಲ್ಲಿ ಗೆದ್ದಿರುವ ರವೀಂದ್ರ ಚವಾಣ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
4 ವರ್ಷಗಳ ಕಾಲ ಬ್ಯಾನ್: ವೈಯಕ್ತಿಕ ದ್ವೇಷದಿಂದ ಮಾಡಲಾಗುತ್ತಿದೆ – ಬಜರಂಗ್ ಪುನಿಯಾ
2019 ರಲ್ಲಿ ಸಕ್ರಿಯ ರಾಜಕೀಯ ಪ್ರವೇಶಿಸಿದ ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದರು. ಐದು ವರ್ಷಗಳ ನಂತರ ಪ್ರಿಯಾಂಕಾ ಗಾಂಧಿ ಜನಪ್ರತಿನಿಧಿಯಾಗಿ ತಮ್ಮ ಪಯಣ ಆರಂಭಿಸಿದ್ದಾರೆ. ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಪತಿ ರಾಬರ್ಟ್ ವಾದ್ರಾ ಅವರ ಜೊತೆಗೆ ಸಂಸತ್ ಭವನಕ್ಕೆ ಆಗಮಿಸಿದ್ದರು. ಅಲ್ಲದೆ, ಪ್ರಿಯಾಂಕಾ ಅವರ ಮಕ್ಕಳಿಬ್ಬರೂ ಕೂಡ ಜೊತೆಗಿದ್ದರು. ತಮ್ಮ ಮೊದಲ ಚುನಾವಣೆಯಲ್ಲೇ 4 ಲಕ್ಷಕ್ಕೂ ಹೆಚ್ಚು ಮತಗಳ ದಾಖಲೆಯ ಜಯ ಕಂಡಿದ್ದಾರೆ.