ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಪತಿ, ಮಗಳ ಜೊತೆ ಎಂಜಾಯ್ ಮಾಡುತ್ತಿರುವ ಪ್ರಿಯಾಂಕ ಹಿಂದೊಮ್ಮೆ ವಿಜಯ್ ದಳಪತಿ ಜೊತೆ ನಟಿಸಲು ಎಂದು ತಾಯಿ ಬಳಿ ಬಿಕ್ಕಿ ಬಿಕ್ಕಿ ಅಂತಿದ್ದರಂತೆ. ವಿಜಯ್ ಜೊತೆ ಸಿನಿಮಾ ಮಾಡಲು ಸ್ಟಾರ್ ನಟಿಯರೇ ಕ್ಯೂನಲ್ಲಿ ನಿಂತಿರುವಾಗ ಪ್ರಿಯಾಂಕ ಹೀಗೆ ಹೇಳಲು ಕಾರಣವೇನು ಎಂಬ ಪ್ರಶ್ನೆ ಶುರುವಾಗಿದೆ. ಈ ಬಗ್ಗೆ ಪ್ರಿಯಾಂಕ ತಾಯಿ ಮಧು ಚೋಪ್ರಾ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ.
ಅಷ್ಟಕ್ಕೂ ಇದು ನಡೆದದ್ದು 2002ರಲ್ಲಿ. ಅಂದು ಏನಾಯಿತು, ಹಾಗೂ ತಾವು ವಿಜಯ್ ಜೊತೆ ನಟಿಸಲು ಹೇಗೆ ಮಗಳ ಮನವೊಲಿಸಿದೆ ಎಂಬ ಬಗ್ಗೆ ಮಧು ಅವರು ಈಗ ಹೇಳಿದ್ದಾರೆ. 2000ನೇ ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡರು. ಅವರಿಗೆ ಕೂಡಲೇ ತಮಿಳು ಚಿತ್ರರಂಗದಿಂದ ಆಫರ್ ಬಂತು. ದಳಪತಿ ವಿಜಯ್ ನಟನೆಯ ‘ತಮಿಳನ್’ ಸಿನಿಮಾಗೆ ನಾಯಕಿ ಆಗುವಂತೆ ಆಫರ್ ನೀಡಲಾಗಿತ್ತು. ಆದರೆ ಪ್ರಿಯಾಂಕಾ ಇದು ಸಾಧ್ಯವಿಲ್ಲ ಎಂದು ಅತ್ತಿದ್ದರಂತೆ. ಅಷ್ಟಕ್ಕೂ ಅವರಿಗೇನು ದಳಪತಿ ವಿಜಯ್ ಜೊತೆ ಮುನಿಸಾಗಲೀ, ಇನ್ನೇನೋ ಇರಲಿಲ್ಲ. ಬದಲಿಗೆ ಸಿನಿಮಾದಲ್ಲಿ ನಟಿಸಲು ಅವರಿಗೆ ಇಷ್ಟವಿರಲಿಲ್ಲವಂತೆ.
ಸಿನಿಮಾಗಳಲ್ಲಿ ನಟಿಸುವುದು ಪ್ರಿಯಾಂಕಾಗೆ ಇಷ್ಟವಿರಲಿಲ್ಲ. ಮಿಸ್ ವರ್ಲ್ಡ್ ಆಗುತ್ತಿದ್ದಂತೆಯೇ ದಕ್ಷಿಣ ಭಾರತದ ಸಿನಿಮಾ ಆಫರ್ ಸಿಕ್ಕಿತು. ಆ ಬಗ್ಗೆ ನಾನು ಆಕೆಗೆ ಹೇಳಿದಾಗ ಅಳಲು ಆರಂಭಿಸಿದಳು. ಸಿನಿಮಾಗಳಲ್ಲಿ ನಟಿಸಲು ತನಗೆ ಇಷ್ಟ ಇಲ್ಲ ಎಂದಳು. ಆದರೆ ಒಪ್ಪಿಕೋ ಎಂದು ನಾನು ತುಂಬಾ ಬಲವಂತ ಮಾಡಿದೆ. ಅವಳಿಗೆ ನಟಿಯಾಗಲು ಇಷ್ಟವೇ ಇರಲಿಲ್ಲ. ನನ್ನ ಬಲವಂತಕ್ಕೆ ಅವಳು ಆ ಚಿತ್ರಕ್ಕೆ ಸಹಿ ಮಾಡಿದಳು ಎಂದು ಮಧು ಚೋಪ್ರಾ ಹೇಳಿದ್ದಾರೆ. ಆದರೆ ಇದು ಪ್ರಿಯಾಂಕಾ ಅವರ ಸಿನಿ ಕೆರಿಯರ್ ಗೆ ದೊಡ್ಡ ಬ್ರೇಕ್ ನೀಡಿತ್ತು. ಆ ಸಿನಿಮಾದ ಬಳಿಕ ಪ್ರಿಯಾಂಕಾಗೆ ಬಾಲಿವುಡ್ನಿಂದ ಆಫರ್ ಬರಲು ಆರಂಭ ಆಯಿತು.
‘ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲು ಆರಂಭಿಸಿದಾಗ ಪ್ರಿಯಾಂಕಾಗೆ ಇಷ್ಟ ಆಯಿತು. ತಮಿಳು ಭಾಷೆ ಬರದಿದ್ದರೂ ಕೂಡ ಆಕೆ ಶೂಟಿಂಗ್ ಎಂಜಾಯ್ ಮಾಡಿದಳು. ಚಿತ್ರತಂಡದವರು ಆಕೆಯನ್ನು ಗೌರವದಿಂದ ನೋಡಿಕೊಂಡರು. ವಿಜಯ್ ಅವರು ಜಂಟಲ್ಮನ್. ಹಾಡಿಗೆ ರಾಜು ಸುಂದರಂ ಕೊರಿಯೋಗ್ರಫಿ ಮಾಡಿದರು. ಆರಂಭದಲ್ಲಿ ವಿಜಯ್ ಜೊತೆ ಡ್ಯಾನ್ಸ್ ಸ್ಟೆಪ್ ಮ್ಯಾಚ್ ಮಾಡಲು ಪ್ರಿಯಾಂಕಾಗೆ ಸಾಧ್ಯವಾಗಲಿಲ್ಲ. ನಂತರ ಕೊರಿಯೋಗ್ರಾಫರ್ ಜೊತೆ ಅಭ್ಯಾಸ ಮಾಡಿ ಶೂಟಿಂಗ್ನಲ್ಲಿ ಭಾಗಿಯಾದಳು’ ಎಂದು ಅಂದಿನ ದಿನವನ್ನು ಮಧು ಚೋಪ್ರಾ ನೆನಪಿಸಿಕೊಂಡಿದ್ದಾರೆ.