ಬಾಲಿವುಡ್ ನಟಿ ಪ್ರಿಯಾಂಚಾ ಚೋಪ್ರಾ ಸದ್ಯ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಇತ್ತೀಚೆಗೆ ಪತಿ ಹಾಗೂ ಮಗಳ ಜೊತೆ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ 2025 ರ ಗೋಲ್ಸ್ ಶೇರ್ ಮಾಡಿದ್ದಾರೆ. ಈ ವರ್ಷ ಸಂಪೂರ್ಣ ಗಮನ ಸಂತೋಷ, ಶಾಂತಿ ಸಮೃದ್ಧಿಯ ಮೇಲೆ ಕೇಂದ್ರೀಕರಿಸಲಾಗುತ್ತದೆ ಎಂದಿದ್ದಾರೆ. ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಅವರ ಮಗಳು ಮಾಲ್ತಿ ಮೇರಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಟಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಸ್ನ್ಯಾಪ್ಶಾಟ್ನಲ್ಲಿ, ಪ್ರಿಯಾಂಕಾ, ಆರೆಂಜ್ ಕಲರ್ ಬಿಕಿನಿ ಧರಿಸಿ ತಮ್ಮ ಐಷಾರಾಮಿ ವಿಲ್ಲಾದ ಪ್ಯಾರಪೆಟ್ನಲ್ಲಿ ನಿಂತಿರುವುದನ್ನು ಕಾಣಬಹುದು.
ಮತ್ತೊಂದು ಫೋಟೋದಲ್ಲಿ ಕೆಂಪು ಸ್ವಿಮ್ಸೂಟ್ನಲ್ಲಿ ಪೋಸ್ ಕೊಟ್ಟಿದ್ದಾರೆ. ಮಾಲ್ತಿ ಮೇರಿ ನೀರಿನಲ್ಲಿ ಆಡುತ್ತಿರುವಾಗ ಸಮುದ್ರತೀರದಲ್ಲಿ ನಿಕ್ ಜೊತೆ ಪೋಸ್ ನೀಡಿದ್ದಾರೆ.
ಸಮೃದ್ಧಿ. ಅದು 2025 ರ ನನ್ನ ಗುರಿಯಾಗಿದೆ. ಸಂತೋಷ, ಮತ್ತು ಶಾಂತಿ ಇರಬೇಕು. ನಾವೆಲ್ಲರೂ ಈ ಹೊಸ ವರ್ಷದಲ್ಲಿ ಸಮೃದ್ಧಿಯನ್ನು ಕಂಡುಕೊಳ್ಳೋಣ. ನನ್ನ ಕುಟುಂಬಕ್ಕೆ ತುಂಬಾ ಕೃತಜ್ಞರಾಗಿರಬೇಕು. 2025 ರ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ.
ಹೊಸ ವರ್ಷದ ಮುನ್ನಾದಿನದಂದು, ಪ್ರಿಯಾಂಕಾ ಬ್ಯಾಡ್ ವೈಬ್ ಜನರ ಜೊತೆ ವ್ಯವಹರಿಸುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಕಾರಾತ್ಮಕ ಶಕ್ತಿ ಹೊಂದಿರುವ ವ್ಯಕ್ತಿಗಳನ್ನು ನಿಭಾಯಿಸುವ ಕುರಿತು ಅವರು ವೀಡಿಯೊವನ್ನು ರೀ ಶೇರ್ ಮಾಡಿದ್ದರು.