ಹಾಲಿವುಡ್ ಸಿನಿಮಾ ರಂಗದಲ್ಲಿ ಸೆಟಲ್ ಆಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಮೇರಿಯೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ.
ಬಲ್ಗರಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಪ್ರಿಯಾಂಕಾ ಚೋಪ್ರಾ ಅದೇ ಕಂಪನಿಯ ಇವೆಂಟ್ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದಾರೆ. ಇದೇ ವೇಳೆ ಅಯೋಧ್ಯೆಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ಪಾಪ್ಸ್ಟಾರ್ ನಿಕ್ ಜೋನಾಸ್ ಅವರು ಮಗಳು ಮಾಲ್ತಿ ಮೇರಿಯೊಂದಿಗೆ ಅಯೋಧ್ಯೆಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜನವರಿಯಲ್ಲಿ ನಡೆದ ಶ್ರೀರಾಮ ಲಲ್ಲಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಬಾಲಿವುಡ್ನ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪ್ರಿಯಾಂಕಾ ಜನವರಿಯಲ್ಲಿ ಭಾರತದಲ್ಲಿ ಇರಲಿಲ್ಲ.
ಇತ್ತೀಚೆಗೆ ಇಶಾ ಅಂಬಾನಿ ಅವರು ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಪ್ರಿಯಾಂಕಾ ಭಾಗವಹಿಸಿದ್ದು, ಪಾರ್ಟಿಯಲ್ಲಿ ದೇಸಿ ಗರ್ಲ್ ಎಲ್ಲರ ಗಮನ ಸೆಳೆದಿದ್ದಾರೆ.
ಅಂದ ಹಾಗೆ ಸದ್ಯ ಬಾಲಿವುಡ್ ತೊರೆದಿರುವ ನಟಿ ಹಾಲಿವುಡ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸದ್ಯ ಬಾಲಿವುಡ್ಗೆ ಬೈ ಬೈ ಹೇಳಿರುವ ಪ್ರಿಯಾಂಕಾ ಹಾಲಿವುಡ್ನಲ್ಲಿ ಭವಿಷ್ಯ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ.
ಪತಿಯ ಜೊತೆ ಅಮೆರಿಕದಲ್ಲಿ ಸೆಟ್ಲ್ ಆಗಿರುವ ಪ್ರಿಯಾಂಕ, ಅಲ್ಲಿ ಹೋಟೆಲ್ ಉದ್ಯಮವನ್ನೂ ಆರಂಭಿಸಿದ್ದರು. ಆದರೆ ಪಾರ್ಟನರ್ ಜೊತೆ ಹೊಂದಾಣಿಕೆ ಆಗದ ಕಾರಣ ಉದ್ಯಮದಿಂದ ಹೊರ ಬಂದರು.