ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಹುಚ್ಚಾಟ ಪ್ರದರ್ಶಿಸಿದ್ದಾನೆ. ತನ್ನ ಆಟೋ ಮೇಲೆ ‘ಡಿ ಬಾಸ್ 6106’ ಎಂದು ಸ್ಟಿಕ್ಕರ್ ಅಂಟಿಸಿಕೊಂಡು ವೀಲ್ಹಿಂಗ್ ಮಾಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿತ್ಯ ರಾತ್ರಿ ಸೆಕ್ಸ್ ಬೇಕೆ ಬೇಕಾ!?- ಜಾಸ್ತಿ ಆದ್ರೆ ಎಷ್ಟೆಲ್ಲಾ ಎಫೆಕ್ಟ್ ಗೊತ್ತಾ!?
ಜಗದೀಶ್ ಅಲಿಯಾಸ್ ಜಗ್ಗ ಎಂಬ ಆಟೋ ಚಾಲಕನು ಈ ರೀತಿ ಅಪಾಯಕಾರಿಯಾಗಿ ಆಟೋ ಚಾಲನೆ ಮಾಡಿದ್ದಾನೆ. ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಆಟೋ ವೀಲ್ಹಿಂಗ್ ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಆತನ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದ ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.
ಆಟೋ ಚಾಲಕ ವೀಲ್ಹಿಂಗ್ ಮಾಡಿದ ದೃಶ್ಯ ವೈರಲ್ ಆದ ಬಳಿಕ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ವಾಹನದ ಸಂಖ್ಯೆಯನ್ನು ಆಧರಿಸಿ ಆರೋಪಿಯ ಪತ್ತೆ ಹಚ್ಚಿದ ಪೊಲೀಸರು ಕೂಡಲೇ ಆತನನ್ನು ಬಂಧಿಸಿದರು. ಆತನಿಗೆ ಎಚ್ಚರಿಕೆ ಕೊಟ್ಟು, ಸ್ಪೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಆಟೋ ಹಿಂದೆ ಹಾಕಿಸಿದ್ದ ‘ಡಿ ಬಾಸ್ 6106’ ಎಂಬ ಸ್ಟಿಕ್ಕರ್ ಅನ್ನು ಪೊಲೀಸರು ತೆಗೆಸಿದ್ದಾರೆ.
ಖೈದಿ ನಂಬರ್ 6106’ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೇ ದಿನಗಳ ಹಿಂದೆ ಇನ್ನೊಂದು ಅತಿರೇಕದ ಘಟನೆ ವರದಿ ಆಗಿತ್ತು. ಪುಟ್ಟ ಮಗುವಿಗೆ ಈ ನಂಬರ್ನ ಬಟ್ಟೆ ಹಾಕಿಸಿ ಫೋಟೋಶೂಟ್ ಮಾಡಿಸಲಾಗಿತ್ತು. ಅದನ್ನು ಕಂಡು ನೆಟ್ಟಿಗರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.