ಬಾಗಲಕೋಟೆ:– ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದ್ದಾರೆ. ತಾಯಿ ಕಳೆದುಕೊಂಡ ಹಿನ್ನೆಲೆ, ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ.
ತಮ್ಮ ತಾಯಿ ಸುಶಿಲಾತಾಯಿ ಅವರು ವಿಧಿವಶರಾದ ಸುದ್ದಿ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ಅಗಲಿಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ, ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ.
ತಾಯಿ ಹೃದಯಕ್ಕೆ ಈ ಜಗತ್ತಿನಲ್ಲಿ ಯಾವುದನ್ನು ಹೋಲಿಸೋದಕ್ಕೆ ಸಾಧ್ಯವಿಲ್ಲ. ತಾಯಿ ಎಂದು ಮರಳಿ ಸಿಗದ ಕೊಡುಗೆ ಇದ್ದ ಹಾಗೆ. ತಾಯಿ ಸದಾ ನೆರಳು ನೀಡುವ ಮರದಂತೆ. ಅವರು ಕುಟುಂಬದ ಜೊತೆ ತಮ್ಮ ನೆನಪನ್ನು ಬಿಟ್ಟು ಹೋಗಿದ್ದಾರೆ. ಅವರು ಅಜರಾಮರ ಎಂದು ಮೋದಿ ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ. ಈ ಸಾಂತ್ವದ ಪತ್ರವನ್ನು ಮುರುಗೇಶ್ ನಿರಾಣಿ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡು, ಮೋದಿಗೆ ಧನ್ಯವಾದ ತಿಳಿಸಿದ್ದಾರೆ.