ಕಲಬುರಗಿ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಯುವ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಇವತ್ತು ಪ್ರಧಾನಿ ಮೋದಿ ಚಾಲನೆ ಕೊಡಲಿದ್ದು ಆ ಕಾರ್ಯಕ್ರಮಕ್ಕೆ ತೆರಳುವ ಮೋದಿಯವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದ್ದಾರೆ.. ಹೌದು ದೆಹಲಿಗೆ ವಿಶೇಷ ವಿಮಾನದಲ್ಲಿ ಹೊರಡುವ ಪ್ರಧಾನಿ ನೇರವಾಗಿ ಕಲಬುರಗಿಗೆ ಬಂದಿಳಿಯಲಿದ್ದಾರೆ..
ನಂತ್ರ 9.50 ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರಕ್ಕೆ ತೆರಳಲಿದ್ದಾರೆ..ಮತ್ತೆ 12.50 ಕ್ಕೆ ವಾಪಾಸ್ ಕಲಬುರಗಿಗೆ ಏರ್ಪೋರ್ಟ್ ಗೆ ಬಂದು ಬೆಂಗಳೂರಿಗೆ ಪಯಣಿಸಲಿದ್ದಾರೆ..ಹೀಗಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಡ್ರೋಣ್ ಹಾರಾಟಕ್ಕೂ ನಿಷೇಧ ಹೇರಲಾಗಿದೆ..ಇದೇವೇಳೆ ಪ್ರಧಾನಿ ಸ್ವಾಗತಿಸಲು ಕೆಲವೇ ಮುಖಂಡರಿಗೆ ಮಾತ್ರ ಅವಕಾಶ ನೀಡಿದೆ ಪಿಎಂ ಕಾರ್ಯಲಯ.