ಕಲಬುರ್ಗಿ:– ಮಹಾರಾಷ್ಟ್ರಕ್ಕೆ ತೆರಳುವ ಹಿನ್ನಲೆ ಪ್ರಧಾನಿ ಮೋದಿ ಇವತ್ತು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಬಂದಿಳಿದರು.
ವಿಮಾನ ನಿಲ್ದಾಣದಲ್ಲಿ ಸರ್ಕಾರದ ಪರವಾಗಿ ಸಚಿವ ಶರಣಪ್ರಕಾಶ್ ಪಾಟೀಲ್ ಸ್ವಾಗತ ಕೋರಿದ್ರು.
ಇದೇ ವೇಳೆ ಕೇಂದ್ರ ಸಚಿವ ಭಗವಂತ ಖೂಬಾ ಸಂಸದ ಉಮೇಶ್ ಜಾಧವ ಶಾಸಕ ಬಸವರಾಜ ಮತ್ತಿಮೂಡ್ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಮೋದಿಯವರನ್ನ ಬರಮಾಡಿಕೊಂಡರು.