ಬಂಗಾರಪೇಟೆ :- ಪ್ರಧಾನಿ ಮೋದಿಯಿಂದ ದೇಶ ದಿವಾಳಿ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನೇ ದಿವಾಳಿ ಮಾಡಿದೆ ಎಂದು ಅಸಂಬದ್ಧವಾಗಿ ಟೀಕಿಸುವ ಪ್ರಧಾನಿ ಮೋದಿ ದೇಶವನ್ನೇ ದಿವಾಳಿ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನಮ್ಮ ದೇಶದ ಸಾಲ ₹53.11 ಲಕ್ಷ ಕೋಟಿ ಅಷ್ಟೇ ಇತ್ತು. ಆದರೆ ಇದೀಗ ಅದು 125 ಲಕ್ಷ ಕೋಟಿ ರು.ವರೆಗೂ ಮುಟ್ಟಿದೆ ಎಂದರು.
ಇನ್ನು, ಪದೇ ಪದೇ ಕಾಂಗ್ರೆಸ್ ಹೆಚ್ಚು ದಿನ ಇರುವುದಿಲ್ಲ ಎಂದು ಮೋದಿ ಅಲ್ಲಲ್ಲಿ ಭವಿಷ್ಯ ನುಡಿಯುತ್ತಾರೆ. ಅದು ಕೇವಲ ಅವರ ಹಗಲುಗನಸು ಎಂದೂ ತಿರುಗೇಟು ನೀಡಿದರು.