ಗುಜರಾತ್ ಪ್ರವಾಸಗೊಂಡಿರೋ ಪ್ರಧಾನಿ ನರೇಂದ್ರ ಮೋದಿ ಜಾಮ್ ನಗರದಲ್ಲಿರೋ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಕೇಂದ್ರವು ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿದೆ. ಈ ಕೇಂದ್ರದಲ್ಲಿ 2 ಸಾವಿರಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ. ಈ ಕೇಂದ್ರವನ್ನ ರಿಲಾಯನ್ಸ್ ಇಂಡಸ್ಟ್ರೀ ಮತ್ತು ರಿಲಾಯನ್ಸ್ ಫೌಂಡೇಷನ್ ಸ್ಥಾಪಿಸಿದೆ. ಇಲ್ಲಿ ಪ್ರಾಣಿ,ಪಕ್ಷಿಗಳ ರಕ್ಷಣೆ, ಸಂರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸಲಾಗುತ್ತಿದೆ. ನರೇಂದ್ರ ಮೋದಿಗೆ ಅನಂತ್ ಅಂಬಾನಿ ಸಾಥ್ ನೀಡಿ ಮಾಹಿತಿ ನೀಡಿದರು.
ವಂತಾರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಭೇದಗಳಿಗೆ ನೆಲೆ ಒದಗಿಸಲಾಗಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ರಕ್ಷಣೆ ಮಾಡಲಾದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರದಲ್ಲಿ ಇರುವಂಥ ವಿವಿಧ ಸೌಲಭ್ಯಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದರು. ಇನ್ನು ಪುನರ್ವಸತಿ ಒದಗಿಸಲಾದ ವಿವಿಧ ಪ್ರಭೇದದ ಪ್ರಾಣಿಗಳೊಂದಿಗೆ ಅವರು ಸಮಯವನ್ನು ಕಳೆದರು.
ನೀವು ಪ್ರತಿದಿನ ಮೊಸರು ತಿನ್ನುತ್ತೀರಾ..? ಹಾಗಾದ್ರೆ ನೀವು ಈ ವಿಷಯಗಳನ್ನು ಮೊದಲು ತಿಳಿದುಕೊಳ್ಳಲೇಬೇಕು!
ವಂತಾರದಲ್ಲಿ ಇರುವ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಎಂಆರ್ಐ, ಸಿಟಿ ಸ್ಕ್ಯಾನ್ಗಳು, ಐಸಿಯುಗಳು ಸೇರಿದಂತೆ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತವೈದ್ಯಶಾಸ್ತ್ರ, ಆಂತರಿಕ ಔಷಧ ಇತ್ಯಾದಿಗಳನ್ನು ಹೊಂದಿರುವ ವಿವಿಧ ವಿಭಾಗಗಳಿಗೆ ಸಹ ಭೇಟಿ ನೀಡಿದರು.
ಇಲ್ಲಿ ಅವರು ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದದ ಹಿಮಾಲಯದ ಚಿರತೆ ಮರಿ, ಕ್ಯಾರಕಲ್ಸ್ (ವಿಶಿಷ್ಟ ಬಗೆಯ ಕಾಡು ಬೆಕ್ಕು) ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳಿಗೆ ಆಹಾರ ನೀಡಿದರು, ಸಂತಸದ ಕ್ಷಣಗಳನ್ನು ಕಳೆದರು.
ಇನ್ನು ಪ್ರಧಾನಿ ಮೋದಿ ಅವರು ಆಹಾರ ನೀಡಿದಂಥ ಬಿಳಿ ಸಿಂಹದ ಮರಿಯು ವಂತಾರದಲ್ಲಿಯೇ ಜನಿಸಿದಂಥದ್ದು. ಅದರ ತಾಯಿಯನ್ನು ರಕ್ಷಿಸಿ, ಆರೈಕೆಗಾಗಿ ವಂತಾರಕ್ಕೆ ಕರೆತಂದ ನಂತರದಲ್ಲಿ ಬಿಳಿ ಸಿಂಹದ ಮರಿಯು ಜನಿಸಿತು. ಭಾರತದಲ್ಲಿ ಹಿಂದೊಮ್ಮೆ ಹೇರಳವಾಗಿದ್ದ ಕ್ಯಾರಕಲ್ಗಳು ಈಗ ಕಂಡುಬರುವುದು ಅಪರೂಪವಾಗುತ್ತಿವೆ. ವಂತಾರದಲ್ಲಿ ಕ್ಯಾರಕಲ್ಗಳ ಸಂರಕ್ಷಣೆಗಾಗಿ ಸೆರೆಯಲ್ಲಿ ಸಂತಾನೋತ್ಪತ್ತಿ ಕಾರ್ಯಕ್ರಮದಡಿ ಸಾಕಲಾಗುತ್ತದೆ ಮತ್ತು ನಂತರ ಕಾಡಿಗೆ ಬಿಡಲಾಗುತ್ತದೆ.