ನವದೆಹಲಿ:- ಕೇಂದ್ರ ಸರ್ಕಾರವು ರೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ.
RCB ಮುಂದಿನ ಆವೃತ್ತಿಯಲ್ಲಿ ರಜತ್ ಪಾಟೀದಾರ್ ಬಿಟ್ಟು ಕೊಡಬಾರದು… ನ್ಯೂಜಿಲೆಂಡ್ನ ಮಾಜಿ ಆಲ್ರೌಂಡರ್ ಸಲಹೆ!
ಹೃದ್ರೋಗ , ಮಧುಮೇಹ, ಮೈಕೈ ನೋವು, ಹೃದಯರಕ್ತನಾಳದ ಕಾಯಿಲೆಗಳು, ಯಕೃತ್ತಿನ ಸಮಸ್ಯೆಗಳು, ಆಂಟಾಸಿಡ್ಗಳು, ಸೋಂಕುಗಳು, ಅಲರ್ಜಿಗಳು, ಮಲ್ಟಿವಿಟಮಿನ್ಗಳು ಮತ್ತು ಆಂಟಿಬಯೋಟಿಕ್ಗಳಿಗೆ ಮೀಸಲಾದ ಔಷಧಿಗಳ ಬೆಲೆಗಳನ್ನು ಔಷಧೀಯ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ ಕಡಿತಗೊಳಿಸಿ ಆದೇಶ ಹೊರಡಿಸಿದೆ. 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್ಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿದೆ.
ಬೆಲೆ ಇಳಿಕೆಯು ಒಂದು ನಿಯಮಿತ ಪ್ರಕ್ರಿಯೆಯಾಗಿದ್ದು, ಪ್ರಾಧಿಕಾರವು ಅದನ್ನು ಅನುಸರಿಸಿದೆ” ಎಂದು ಎನ್ಪಿಪಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಕ್ತದ ಗ್ಲುಕೋಸ್ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್ಸೊನೈಡ್ ಹಾಗೂ ಫಾರ್ಮೊಟೆರೋಲ್ನ ಒಂದು ಡೋಸ್ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.
ಮಧುಮೇಹ, ಹೃದ್ರೋಗ, ಯಕೃತ್ತಿನ ಸಮಸ್ಯೆ, ಆ್ಯಂಟಿಬಯೋಟಿಕ್ಸ್, ಮಲ್ಟಿ ವಿಟಮಿನ್ ಸೇರಿ ಹಲವು ಔಷಧಗಳ ಬೆಲೆಯನ್ನು ಎನ್ಪಿಪಿಎ ಇಳಿಕೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಮಧುಮೇಹಿಗಳು ಇರುವ ದೇಶಗಳಲ್ಲಿ ಭಾರತವೂ ಸೇರಿದೆ. ಹಾಗಾಗಿ, ಸಕ್ಕರೆ ಕಾಯಿಲೆಗೆ ಬಳಸುವ ಮಾತ್ರೆಗಳು ಹಾಗೂ ಇನ್ಸುಲಿನ್ಗಳ ಬೆಲೆಯನ್ನು ಇಳಿಕೆ ಮಾಡಿರುವುದು ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.
ಕೆಲ ತಿಂಗಳ ಹಿಂದಷ್ಟೇ ಔಷಧಗಳ ಬೆಲೆ ಏರಿಕೆ ಕುರಿತು ವದಂತಿಗಳು ಹರಡಿದ್ದವು. ಆದರೆ, ಕೇಂದ್ರ ಸರ್ಕಾರವು ಇದನ್ನು ಅಲ್ಲಗಳೆದಿತ್ತು. ಏಪ್ರಿಲ್ 1ರಿಂದ 500ಕ್ಕೂ ಅಧಿಕ ಔಷಧಗಳ ಬೆಲೆಯಲ್ಲಿ ಶೇ.12ರಷ್ಟು ಬೆಲೆ ಏರಿಕೆಯಾಗಿದೆ ಎಂಬ ವದಂತಿಗಳು ವರದಿಗಳು ಸತ್ಯಕ್ಕೆ ದೂರವಾಗಿವೆ. ಜನರ ಹಾದಿ ತಪ್ಪಿಸಲು ಇಂತಹ ವರದಿಗಳನ್ನು ಹರಿಬಿಡಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಸಗಟು ಬೆಲೆ ಸೂಚ್ಯಂಕದ ಆಧಾರದ ಬೆಲೆ ಏರಿಕೆ ಮಾಡುತ್ತದೆ. ಆದರೆ, 782 ಔಷಧಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇನ್ನು ಸುಮಾರು 54 ಔಷಧಗಳ ಬೆಲೆಯು ಒಂದು ಪೈಸೆ ಮಾತ್ರ ಏರಿಕೆಯಾಗಿದೆ ಎಂದು ಈ ಹಿಂದೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿತ್ತು.