ವಾಷಿಂಗ್ಟನ್: 64 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದಿದ ಪರಿಣಾಮ ವಿಮಾನದಲ್ಲಿದ್ದ ಅಷ್ಟು ಪ್ರಯಾಣಿಕರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಮಾನ ಮತ್ತು ಮಿಲಿಟರಿ ಹೆಲಿಕಾಪ್ಟರ್ ನಡುವಿನ ಇಂತಹ ಅಪಘಾತಕ್ಕೆ ನೇಮಕಾತಿಯಲ್ಲಿ ವಿವಿಧ ನೀತಿಗಳೇ ಕಾರಣ ಎಂದು ಆರೋಪಿಸಿದ್ದಾರೆ.
ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿದ್ದ ಯಾರೂ ಬದುಕುಳಿದಿಲ್ಲ. ರಾತ್ರಿ ಈ ಭೀಕರ ಅಪಘಾತ ಸಂಭವಿಸಲು ಹೆಲಿಕಾಪ್ಟರ್ ಪೈಲಟ್ ನ ದೋಷವೇ ಕಾರಣವಾಗಿದೆ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜೊ ಬೈಡನ್ ಮತ್ತು ಬರಾಕ್ ಒಬಾಮಾ ಅವರ ಎಡಪಂಥೀಯ ಸರ್ಕಾರ ಅವಧಿಯಲ್ಲಿ ನೇಮಕಾತಿ ನೀತಿಯಲ್ಲಿ ವೈವಿಧ್ಯತೆಯೇ ಕಾರಣವಾಗಿದೆ ಎಂದು ದೂಷಿಸಿದರು. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ನಲ್ಲಿ ಉತ್ತಮ ಉದ್ಯೋಗಿಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು ಎಂದು ಟ್ರಂಪ್ ಆರೋಪಿಸಿದ್ದಾರೆ.
ನನ್ನಲ್ಲಿ ಕೇಳುವುದಾದರೆ ಇಲ್ಲಿ ಸುರಕ್ಷತೆಯೇ ಮುಖ್ಯವಾಗುತ್ತದೆ. ಒಬಾಮಾ, ಬೈಡನ್ ಮತ್ತು ಡೆಮೋಕ್ರಾಟ್ ಗಳು ನೀತಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅವರು ಬಿಳಿ ಜನರಿಗೆ ಆದ್ಯತೆ ನೀಡಿದರು. ಆದರೆ ನಾವು ಸಮರ್ಥ ಉದ್ಯೋಗಿಗಳಿಗೆ ಮಣೆ ಹಾಕುತ್ತೇವೆ ಎಂದಿದ್ದಾರೆ.