ನವದೆಹಲಿ: ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ರೀಸಾಮಾನ್ಯರ ರೀತಿ ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಭಾರೀ ಭದ್ರತೆಯ ಅಂಗರಕ್ಷಕ ಪಡೆಯನ್ನು ತೊರೆದ ರಾಷ್ಟ್ರಪತಿಗಳು ಕೆಲ ಹೊತ್ತು ಮೆಟ್ರೋದಲ್ಲಿ ಸಂಚರಿಸಿ ಸಹ ಪ್ರಯಾಣಿಕರ ಅಚ್ಚರಿಗೆ ಕಾರಣರಾದರು.
ದೇಶದ ಪ್ರಥಮಪ್ರಜೆಯನ್ನು ಹತ್ತಿರದಿಂದ ಕಂಡು ಜನ ಸಂಭ್ರಮಿಸಿದರು. ಪಕ್ಕದಲ್ಲೇ ಕುಳಿತಿದ್ದ ವಿದ್ಯಾರ್ಥಿಗಳ ಜೊತೆ ರಾಷ್ಟ್ರಪತಿಗಳು ಸಂವಾದ ನಡೆಸಿದ್ರು. ದೆಹಲಿ ಮೆಟ್ರೊದ ನೇರಳೆಮಾರ್ಗದಲ್ಲಿ ಮುರ್ಮು ಪ್ರಯಾಣಿಸಿದ್ದಾರೆ. ಕಾಶ್ಮೀರ್ ಗೇಟ್- ರಾಜಾ ನಹರ್ ಸಿಂಗ್ (ಬಲ್ಲಭಗಢ) ನಡುವೆ ಈ ನೇರಳೆ ಮಾರ್ಗ ಚಲಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.