ಮಾಸ್ಕೋ: ಪ್ರೇಯಸಿ (Lover) ಮೇಲೆ ಅತ್ಯಾಚಾರಗೈದು, 111 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪ್ರೇಮಿಯೊಬ್ಬನನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕ್ಷಮಿಸಿ ಬಿಡುಗಡೆ ಮಾಡಿಸಿದ್ದಾರೆ. ಯುವಕನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ (Russia Military) ಸೇರಿ ಹೋರಾಟ ಮಾಡಲು ನಿರ್ಧರಿಸಿದ ನಂತರ ವ್ಲಾಡಿಮಿರ್ ಪುಟಿನ್, ಆತನ ಅಪರಾಧವನ್ನ ಕ್ಷಮಿಸಿದ್ದಾರೆ. ವ್ಲಾಡಿಸ್ಲಾವ್ ಕಾನ್ಯುಸ್ ಎಂಬಾತ ತನ್ನ ಪ್ರೇಯಸಿ ಪೆಖ್ಟೆಲೆವಾ (Vera Pekhteleva) ಎಂಬಾಕೆಯನ್ನು ಕ್ರೂರವಾಗಿ ಕೊಂದು 17 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆತ ಸೇನೆಗೆ ಸೇರಲು ಬಯಸಿದ್ದರಿಂದ ಶಿಕ್ಷೆ ಅವಧಿಗೆ ಒಂದು ವರ್ಷ ಮುಂಚಿತವಾಗಿಯೇ ಅಪರಾಧಿಯನ್ನ ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ.
ಕ್ಯಾನ್ಸನ್ ತನ್ನ ಗೆಳತಿಗೆ ಸತತ ಮೂರುವರೆ ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿದ್ದ. ಅಷ್ಟು ಸಾಲದ್ದಕ್ಕೆ 111 ಬಾರಿ ಚಾಕುವಿನಿಂದ ಇರಿದಿದ್ದ, ನಂತ್ರ ಕೇಬಲ್ ವಯರ್ನಿಂದ ಕತ್ತು ಹಿಸುಕಿ ಕೊಂದಿದ್ದ. ಆಕೆಯ ಚೀರಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಲು ಸಾಕಷ್ಟು ಬಾರಿ ಕರೆ ಮಾಡಿದ್ದರು. ಆದ್ರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಂತರ ಆತನನ್ನ ಪತ್ತೆಹಚ್ಚಿ ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಆತ ಮಿಲಿಟರಿಗೆ ಸೇರಲು ಬಯಸಿದ್ದರಿಂದ ಆತನ ತಪ್ಪುಗಳನ್ನ ಕ್ಷಮಿಸಿ ಬಿಡುಗಡೆ ಮಾಡಲಾಗಿದೆ. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ ಅವರು ವಿಷಯವನ್ನು ಖಚಿತಪಡಿಸಿದ್ದಾರೆ.
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ʼನಲ್ಲಿದೆ ಉದ್ಯೋಗಾವಕಾಶ..! ಬೆಂಗಳೂರಿನಲ್ಲಿಯೇ ಪೋಸ್ಟಿಂಗ್
ವೆರಾ ಪೆಖ್ಟೆಲೆವಾ ಅವರ ತಾಯಿ ಒಕ್ಸಾನಾ, ಕ್ಯಾನ್ಸನ್ ಶಸ್ತ್ರಾಸ್ತ್ರ ಹಿಡಿದು, ಮಿಲಿಟರಿ ಸಮವಸ್ತ್ರದಲ್ಲಿ ನಿಂತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ನನ್ನ ಮಗು ಸಮಾಧಿಯಲ್ಲಿ ಕೊಳೆಯುತ್ತಿದೆ. ಆದ್ರೆ ನನ್ನ ಮಗುವನ್ನು ಕೊಂದ ಆರೋಪಿ ಹೊರಗಿದ್ದಾನೆ. ಇದು ನಿಜಕ್ಕೂ ನನಗೆ ಅತೀವ ನೋವನ್ನುಂಟುಮಾಡಿದೆ. ನನ್ನ ಜೀವನದ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೇನೆ. ಇನ್ಮುಂದೆ ನಾನು ಬದುಕುವುದರಲ್ಲಿ ಅರ್ಥವಿಲ್ಲ. ಪುಟಿನ್ ಅವರ ಕ್ರಮ ನನ್ನನ್ನು ಸಂಪೂರ್ಣವಾಗಿ ಮುಗಿಸಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಅಪರಾಧಿ ಕ್ಯಾನ್ಸನ್ನನ್ನ ಬಿಡುಗಡೆ ಮಾಡಿದ ಬಳಿಕ ಉಕ್ರೇನ್ ಗಡಿಯಲ್ಲಿರುವ ದಕ್ಷಿಣ ರಷ್ಯಾದ ರೋಸ್ಟೊವ್ಗೆ ವರ್ಗಾಯಿಸಲಾಗಿದೆ ಎಂಬುದಾಗಿ ಜೈಲು ಅಧಿಕಾರಿಗಳು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ ಅವರಿಗೆ ವಿಷಯ ಖಚಿತಪಡಿಸಿದ್ದಾರೆ. ಆ ನಂತರ ನವೆಂಬರ್ 3 ರಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಕಚೇರಿಯಿಂದ ಆರೋಪಿ ಬಿಡುಗಡೆಗೊಳಿಸಿದ ಆದೇಶ ಪತ್ರವನ್ನ ಹಂಚಿಕೊಂಡಿದ್ದಾರೆ.