ಪ್ರಯಾಗ್ರಾಜ್:- ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪುಣ್ಯಸ್ನಾನ ಮಾಡಿದ್ದು, ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಮೆಟ್ರೋ ಟಿಕೆಟ್ ದರ ದುಬಾರಿ: ಪ್ರಯಾಣಿಕರ ಸಂಖ್ಯೆ ಇಳಿಯಬಹುದು ಎಂದ ಸಾರಿಗೆ ಸಚಿವ!
ಪ್ರಯಾಗ್ರಾಜ್ಗೆ ಬಂದಿಳಿದ ದ್ರೌಪದಿ ಮುರ್ಮು ಅವರನ್ನು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು
ರಾಷ್ಟçಪತಿ ದ್ರೌಪದಿ ಮುರ್ಮು 8 ಗಂಟೆಗಳ ಕಾಲ ಪ್ರಯಾಗ್ರಾಜ್ನಲ್ಲಿ ಸಮಯ ಕಳೆಯಲಿದ್ದಾರೆ. ಅಕ್ಷಯವತ್ ಹಾಗೂ ಹನುಮಾನ್ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.